ಕಲಘಟಗಿ: ಸರಕಾರದ ಆದೇಶದಂತೆ ದೇಶದಲ್ಲಿ ಹರ್ ಘರ್ ತಿರಂಗಕ್ಕೆ ಕಲಘಟಗಿ ಪಟ್ಟಣ ಪಂಚಾಯತ್ ನವರು ಹಾಗೂ ಕಲಘಟಗಿ ಪಟ್ಟಣ ಯುವಕರು ಎರಡು ಸಾವಿರ ಧ್ವಜಗಳನ್ನು ಮನೆ ಮನೆಗೆ ಹಂಚ್ಚಲು ಭರ್ಜರಿ ತಯಾರಿ ನಡೆಸಿದ್ದಾರೆ.
ಅಷ್ಟೊಂದು ಧ್ವಜಗಳನ್ನು ತಯಾರಿಸಲು ಕಲಘಟಗಿಯ ಮೇಘಾ ಸೇವಾ ಸಂಸ್ಥೆ ಹಾಗೂ ವಿಜಯಲಕ್ಷ್ಮಿ ಸೇವಾ ಸಂಸ್ಥೆಗಳು ಮುಂದೆ ಬಂದಿದ್ದು, ಆ ಸಂಸ್ಥೆಗಳಲ್ಲಿ ಮಹಿಳೆಯರು ಮತ್ತು ಯುವತಿಯರು ಧ್ವಜಗಳನ್ನು ತಯಾರಿಸುತ್ತಿದ್ದಾರೆ.
ಈ ಹಿನ್ನೆಲೆ ಪಟ್ಟಣದಲ್ಲಿ ಧ್ವಜಗಳ ತಯಾರಿಸುವ ಕಾರ್ಯ ಜೋರಾಗಿ ನಡೆಯುತ್ತಿದೆ. ಏನೇ ಆಗಲಿ ಮಹಿಳೆಯರ ಈ ದೇಶಭಕ್ತಿಯ ಕೆಲಸಕ್ಕೆ ಕಲಘಟಗಿ ಜನತೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ವರದಿ: ಉದಯ ಗೌಡರ
Kshetra Samachara
02/08/2022 09:45 pm