ಹುಬ್ಬಳ್ಳಿ: ಇನ್ಫೋಸಿಸ್ ಹುಬ್ಬಳ್ಳಿ ಘಟಕ ಇಂದಿನಿಂದ ಕಾರ್ಯಾರಂಭವಾಗಿದೆ. ಧಾರವಾಡ ಜಿಲ್ಲೆಯನ್ನು ಐಟಿ-ಬಿಟಿ ಕೇಂದ್ರ ಮಾಡುವ ದಶಕಗಳ ಕನಸನ್ನು ನನಸು ಮಾಡುವುದಕ್ಕಾಗಿ ನಡೆಸಿದ ನಿರಂತರ ಅಭಿಯಾನಕ್ಕೆ ಸಂದ ಅಭೂತಪೂರ್ವ ಯಶಸ್ಸಾಗಿದೆ.
ಇನ್ಫೋಸಿಸ್ ಹುಬ್ಬಳ್ಳಿ ಘಟಕದಲ್ಲಿ ಇವತ್ತೇ ಸಹಾಯಕ ಸಿಬ್ಬಂದಿ (ಸಪೋರ್ಟ್ ಸ್ಟಾಫ್) ಗಳ ಸಂದರ್ಶನ ಕೂಡ ಶುರುವಾಗಿತ್ತು. ಇನ್ಫೋಸಿಸ್ ಹುಬ್ಬಳ್ಳಿ ಸಂಪೂರ್ಣ ಕಾರ್ಯಾರಂಭ ಮಾಡಿ ಯಶಸ್ವಿಯಾಗಿ ಕಾರ್ಯಾಚರಣೆ ಮಾಡಿದರೆ 5000 ಸಿಬ್ಬಂದಿಗಳಿಗೆ ಕೆಲಸ ಕೊಡಬಹುದು. ಇನ್ಫೋಸಿಸ್ ಯಶಸ್ವಿಯಾಗಿ ಕಾರ್ಯಾಚರಣೆ ಮಾಡಿದ್ದಲ್ಲಿ ಬೇರೆ ಐಟಿ-ಬಿಟಿ ಕಂಪನಿಗಳು ಧಾರವಾಡ ನಗರದ ಕಡೆಗೆ ಸೆಳೆಯುತ್ತದೆ.
ಇಂದು ಬೆಳಿಗ್ಗೆ ಸ್ಟಾರ್ಟ್-ಇನ್ಫೋಸಿಸ್-ಹುಬ್ಬಳ್ಳಿ ತಂಡ ಈ ಐತಿಹಾಸಿಕ ದಿನದಂದು, ಸಂಭ್ರಮಾಚರಣೆಯನ್ನು ಇನ್ಫೋಸಿಸ್ ಕಟ್ಟಡ ಚಿತ್ರದ ಕೇಕ್ ಕತ್ತರಿಸಿ ಸಿಹಿಯನ್ನು ಅಲ್ಲಿ ಸೇರಿದ ನೂರಾರು ವಿದ್ಯಾರ್ಥಿಗಳಿಗೆ, ರೈತರಿಗೆ, ಐಟಿ ವೃತ್ತಿಪರರು ಹಾಗು ಐಟಿ ಉದ್ಯಮಿಗಳಿಗೆ ಹಂಚಿಕೊಂಡು ಆಚರಿಸಿದರು. ನಂತರ ಝೀ ಮೈನರ್ ಬ್ಯಾಂಡ್ ನವರ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಸುಮಧುರ ಸಂಗೀತವನ್ನು ನೆರೆದ ತಂಡದವರು ಮತ್ತು ವಿದ್ಯಾರ್ಥಿಗಳು ಹಾಡಿ ಕುಪ್ಪಳಿಸುತ್ತಾ ಇನ್ಫೋಸಿಸ್ ನ್ನೂ ಹುಬ್ಬಳ್ಳಿ ನಗರಕ್ಕೆ ಸ್ವಾಗತಿಸಿದರು.
Kshetra Samachara
02/08/2022 06:55 pm