ಹುಬ್ಬಳ್ಳಿ: ಜಿಲ್ಲೆ, ತಾಲೂಕು ಹಾಗೂ ಗ್ರಾಮೀಣ ಭಾಗದಲ್ಲಿ ಕೆಲಸವನ್ನು ಹುಡುಕುತ್ತಿದ್ದೀರಾ..? ಹಾಗಿದ್ದರೆ ಇಲ್ಲಿದೆ ನೋಡಿ ಒಂದು ಸುವರ್ಣ ಅವಕಾಶ...
ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್- ಮಂಗಳೂರಿನ ಸಂಸ್ಥೆಯೊಂದು ಆಹ್ವಾನಿಸುತ್ತಿದೆ ವಿದ್ಯಾವಂತ ಯುವಕ ಯುವತಿಯರಿಗೆ ಉದ್ಯೋಗ ಅವಕಾಶ. ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ (ರಿ) ಮಂಗಳೂರು ಇವರಿಗೆ ಧಾರವಾಡ, ಹಾವೇರಿ, ಗದಗ, ಜಿಲ್ಲೆಯ ವಿವಿಧ ತಾಲೂಕಿನ ನವೋದಯ ಸ್ವಸಹಾಯ ಗುಂಪು ಯೋಜನೆಗೆ ತಾಲೂಕು ಮೇಲ್ವಿಚಾರಕರು ಮತ್ತು ಪ್ರೇರಕರಾಗಿ ಕೆಲಸ ನಿರ್ವಹಿಸಲು ಆಸಕ್ತಿ ಹೊಂದಿದ ಸೂಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಧಾರವಾಡ ಜಿಲ್ಲೆಯಲ್ಲಿ 06 ಮೇಲ್ವಿಚಾರಕ ಹುದ್ದೆಗಳು ಖಾಲಿ ಇದ್ದು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ, ಧಾರವಾಡ ತಾಲೂಕು, ಅಳ್ನಾವರ ತಾಲೂಕು, ಹುಬ್ಬಳ್ಳಿ ತಾಲೂಕು, ಕಲಘಟಗಿ ತಾಲೂಕು,ನವಲಗುಂದ ತಾಲೂಕು, ಕುಂದಗೋಳ ತಾಲೂಕಿನ ವಿವಿಧ ಗ್ರಾಮಗಳ ವ್ಯಾಪ್ತಿಯ ಕೇಂದ್ರಕ್ಕೆ ಪ್ರೇರಕರು ಬೇಕಾಗಿದ್ದಾರೆ.
ಇನ್ನೂ ಗದಗ ಜಿಲ್ಲೆಯ ಗದಗ ತಾಲೂಕು, ನರಗುಂದ, ರೋಣ, ಶಿರಹಟ್ಟಿ, ಮುಂಡರಗಿ, ಲಕ್ಷ್ಮೇಶ್ವರ, ಗಜೇಂದ್ರಗಡ ತಾಲೂಕಿನ ವಿವಿಧ ಗ್ರಾಮಗಳ ವ್ಯಾಪ್ತಿಯ ಕೇಂದ್ರಕ್ಕೆ ಪ್ರೇರಕರು ಬೇಕಾಗಿದ್ದಾರೆ.
ಅಲ್ಲದೇ ಹಾವೇರಿ ಜಿಲ್ಲೆಯ ಹಾಗೂ ಹಾವೇರಿ ತಾಲೂಕು, ಸವಣೂರು ತಾಲೂಕು, ಶಿಗ್ಗಾಂವ, ಹಿರೇಕೆರೂರು, ರಾಣೆಬೆನ್ನೂರು, ಬ್ಯಾಡಗಿ ತಾಲೂಕಿನ ವಿವಿಧ ಗ್ರಾಮಗಳ ವ್ಯಾಪ್ತಿಯ ಕೇಂದ್ರಕ್ಕೆ ಪ್ರೇರಕರು ಬೇಕಾಗಿದ್ದಾರೆ. ಆಸಕ್ತರು ಕೂಡಲೇ ಅರ್ಜಿ ಸಲ್ಲಿಸುವ ಮೂಲಕ ಸುವರ್ಣ ಅವಕಾಶದ ಸದುಪಯೋಗ ಪಡೆದುಕೊಳ್ಳಬೇಕಿದೆ.
ವಿದ್ಯಾರ್ಹತೆ:
ತಾಲೂಕು ಮೇಲ್ವಿಚಾರಕ ಹುದ್ದೆಗೆ ಕನಿಷ್ಠ ಪಿಯುಸಿ ಮೇಲ್ಪಟ್ಟ ವಿದ್ಯಾರ್ಹತೆ ಹೊಂದಿರಬೇಕು. ಸ್ವಸಹಾಯ ಗುಂಪು ಯೋಜನೆಯಲ್ಲಿ ಕನಿಷ್ಠ ಒಂದು ವರ್ಷ ಕೆಲಸ ಮಾಡಿ ಅನುಭವ ಹೊಂದಿರುವ ಪುರುಷ ಅಭ್ಯರ್ಥಿಗಳಿಗೆ ಪ್ರಥಮ ಆದ್ಯತೆ ನೀಡಲಾಗುತ್ತದೆ.
ಪ್ರೇರಕ ಹುದ್ದೆಗೆ: ಕನಿಷ್ಠ ಎಸ್.ಎಸ್.ಎಲ್.ಸಿ ಹಾಗೂ ಮೇಲ್ಪಟ್ಟ ವಿದ್ಯಾರ್ಹತೆ ಹೊಂದಿರುವ ಪುರುಷ ಹಾಗೂ ಮಹಿಳಾ ಅಭ್ಯರ್ಥಿ ಅರ್ಜಿ ಸಲ್ಲಿಸಬಹುದು.
ವಿಶೇಷ ಸೂಚನೆ: ಈ ಕುರಿತು ದಿನಾಂಕ: 05-03-2022ರ ಒಳಗಾಗಿ ಅಂಚೆ ಹಾಗೂ ಇಮೇಲ್ ಮೂಲಕ ಅರ್ಜಿ ಸಲ್ಲಿಸಬಹುದು. ಅಲ್ಲದೇ ಕೆಳಗೆ ನೀಡಿರುವ ವಿಳಾಸಕ್ಕೆ ಖುದ್ದಾಗಿ ಬಂದು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ವಿಳಾಸ-
ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್(ರಿ)
ಉಪ ಕಚೇರಿ
ನವೋದಯ ಕಾಲೋನಿ, ಅಮರಗೋಳ ನವನಗರ ಹುಬ್ಬಳ್ಳಿ.
ನವೋದಯ ಸಮೂಹ ಸಂಸ್ಥೆಗಳು ನವೋದಯ ಕಾಲೋನಿ(ನವೋದಯ ಕಾನ್ವೆಂಟ್ ಸ್ಕೂಲ್) ಅಮರಗೋಳ ನವನಗರ ಹುಬ್ಬಳ್ಳಿ
ದೂರವಾಣಿ ಸಂಖ್ಯೆ-9380287709 ಹಾಗೂ 0836-2225799
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
22/02/2022 01:35 pm