ಹುಬ್ಬಳ್ಳಿ: ವಿಜ್ಞಾನ ಲೋಕದ ಆವಿಷ್ಕಾರದಲ್ಲಿ ನಿತ್ಯ ಹೊಸ ಬದಲಾವಣೆ ಹೊಸ ಬೆಳವಣಿಗೆ ಸಹಜ. ಇಂತಹ ಬೆಳವಣಿಗೆಗೆ ಪೂರಕವಾಗಿ ಇಲ್ಲೊಂದು ಸಂಸ್ಥೆ, ದೇಶಪಾಂಡೆ ಸುಸಂಧಿ ಫೆಲೋಶಿಪ್ ಮೂಲಕ ಅದೆಷ್ಟೋ ಬಿ.ಎಸ್ಸಿ ಪದವೀಧರರಿಗೆ ಬದುಕು ಕಟ್ಟಿ ಕೊಟ್ಟಿದೆ.
ಹೌದು ! ಈಗಾಗಲೇ ಬಿ.ಎಸ್ಸಿ ಪದವಿ ಮುಗಿಸಿರುವ ಯುವಕ ಯುವತಿಯರಿಗೆ ದೇಶಪಾಂಡೆ ಫೌಂಡೇಶನ್ ನೀಡುತ್ತಿರುವ ನಾಲ್ಕು ತಿಂಗಳ ಫೆಲೋಶಿಪ್ ಸದೃಢ ದೇಹದಲ್ಲಿ ಸದೃಢ ಮನಸ್ಸನ್ನು ರೂಪಿಸಿ ಜ್ಞಾನ ಭಂಡಾರವನ್ನೇ ಧಾರೆ ಎರೆದು ಅವರಿಷ್ಟದ ಉದ್ಯೋಗ ನೀಡಿದೆ.
ಕೇವಲ ಥಿಯರಿ ಶಿಕ್ಷಣ ಮಾತ್ರವಲ್ಲ ಪ್ರ್ಯಾಕ್ಟಿಕಲ್, ಲ್ಯಾಬ್, ಟೆಕ್ನಿಕಲ್, ಸಾಫ್ಟವೇರ್, ಹಾರ್ಡವೇರ್, ಕಂಪ್ಯೂಟರ್ ನಾಲೆಜ್, ಬ್ಯುಸಿನೆಸ್ ಡೆವಲಪ್, ಸೇರಿದಂತೆ ಧ್ಯಾನ, ಯೋಗ, ಕ್ರೀಡೆಗಳ ಮಜಲನ್ನು ಅತಿ ಉತ್ತಮ ವಾತಾವರಣದಲ್ಲಿ ಕಲ್ಪಿಸಿಕೊಟ್ಟಿದೆ. ಈಗಾಗಲೇ ದೇಶಪಾಂಡೆ ಫೌಂಡೇಶನ್ ಸುಸುಂಧಿ ಫೆಲೋಶಿಪ್ ಒಳಗೆ ಒಟ್ಟು ಎರೆಡು ಬ್ಯಾಚ್'ನ 65 ಪದವೀಧರರು ತರಬೇತಿ ಅವಧಿ ಯಶಸ್ವಿಯಾಗಿ ಪೂರೈಸಲಿದ್ದು ಅವರು ಫೆಲೋಶಿಪ್ ದಿನಗಳ ಮೆಲುಕು ಏನಿದೆ ಕೇಳಿ.
ಹಳ್ಳಿ ಹಳ್ಳಿಗಳಿಂದ ಹಿಡಿದು ರಾಜ್ಯಾದ್ಯಂತ ದೇಶಪಾಂಡೆ ಫೌಂಡೇಶನ್ ಫೆಲೋಶಿಪ್ ತರಬೇತಿಗೆ ಬರುವ ಪದವೀಧರ ಯುವಕ ಯುವತಿಯರಿಗೆ ಪ್ರತ್ಯೇಕ ಹಾಸ್ಟೆಲ್ ಹಾಗೂ ವೈದ್ಯಕೀಯ ಸೇವೆ, ಆಟೋಟ, ವ್ಯಾಯಾಮ ಸೌಕರ್ಯ ಸೇರಿ ಒಂದು ಯುನಿವರ್ಸಿಟಿ ನೀಡಬೇಕಾದ ಎಲ್ಲಾ ಸವಲತ್ತುಗಳಿದ್ದು ಇಲ್ಲಿ ತರಬೇತಿ ಮುಗಿಸಿದ ಶೆ.85% ಪ್ರತಿಶತ ಪದವೀಧರರು ಉದ್ಯೋಗ ಪಡೆದಿದ್ದಾರೆ.
ಒಟ್ಟಾರೆ ಬಿಎ, ಬಿ.ಕಾಮ್, ಬಿ.ಎಸ್ಸಿ, ಡಿಪ್ಲೋಮಾ, ಇಂಜಿನಿಯರಿಂಗ್, ಬಿಸಿಎ, ಎಂಬಿಎ, ಐಟಿಐ, ಪದವೀಧರಿಗೆ ನಾಲ್ಕೇ ನಾಲ್ಕು ತಿಂಗಳಲ್ಲಿ ಸೂಕ್ತ ತರಬೇತಿ ನೀಡಿ ಉನ್ನತ ಕಂಪನಿ ಪ್ಲೇಸ್‌ಮೇಂಟ್ ಪರಿಚಯಿಸಿ ಜೊತೆಗೆ ಸ್ವಂತ ಉದ್ಯೋಗಕ್ಕೂ ಮಾರ್ಗ ಕಲ್ಪಿಸಿದ ದೇಶಪಾಂಡೆ ಫೌಂಡೇಶನ್ ಫೆಲೋಶಿಪ್ ರಾಜ್ಯಾದ್ಯಂತ ಪದವೀಧರರಿಗೆ ಜ್ಞಾನ ದೇಗುಲ ಹಾಗೂ ಉದ್ಯೋಗದ ವರವಾಗಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
29/05/2022 08:42 pm