ಹುಬ್ಬಳ್ಳಿ: ದೀನದಯಾಳ ಅಂತ್ಯೋದಯ ಯೋಜನೆಯಡಿ ವಿವಿಧ ಉದ್ಯೋಗ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಡಾಟಾ ಎಂಟ್ರಿ ಆಪರೇಟರ್, ಟೈಲರ್, ಸಾಫ್ಟವೇರ್ ಡಿಜಿಟಲ್ ಡೆವಲಪರ್, ಟೆಕ್ನೀಷಿಯನ್, ಮೊಬೈಲ್ ರಿಪೇರಿ, ಎಲೆಕ್ಟ್ರಿಕಲ್ ಸಹಾಯಕ, ಫ್ಯಾಷನ್ ಡಿಜೈನ್, ಸೇರಿದಂತೆ ವಿವಿಧ ಉದ್ಯೋಗ ಆಧಾರಿತ ತರಬೇತಿಗಳನ್ನು ನೀಡಲಾಗುವುದು. 8ನೇ ತರಗತಿ, 10ನೇ ತರಗತಿ, ಪಿಯುಸಿ, ಐ.ಟಿ.ಐ, ಡಿಪ್ಲೊಮೋ, ಬಿಎಸ್ಸಿ, ಬಿಟೆಕ್ ಉತ್ತೀರ್ಣರಾದ ಹುಬ್ಬಳ್ಳಿ ಧಾರವಾಡ ಅವಳಿ ನಗರದ, 16 ರಿಂದ 45 ವಯೋಮಾನದ, ವಾರ್ಷಿಕ 1.20 ಲಕ್ಷ ಆದಾಯ ಮಿತಿ ಹೊಂದಿರುವ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಹುಬ್ಬಳ್ಳಿಯ ಮಹಾನಗರ ಪಾಲಿಕೆ ಕಚೇರಿ ಆವರಣದಲ್ಲಿನ ದಿನದಯಾಳ ಅಂತ್ಯೋದಯ ಯೋಜನೆ ಕಚೇರಿ, ದೂರವಾಣಿ ಸಂಖ್ಯೆ 0836-2352866 ಹಾಗೂ ಧಾರವಾಡದ ಹಳೇ ಬಸ್ ನಿಲ್ದಾಣದ ಮಹಾನಗರ ಪಾಲಿಕೆ ಹೆರಿಗೆ ಆಸ್ಪತ್ರೆ ಕಚೇರಿ ದೂರವಾಣಿ ಸಂಖ್ಯೆ 0836-2790079 ನಿಂದ ಅರ್ಜಿಯನ್ನು ಪಡೆದುಕೊಳ್ಳಬಹುದು.
ವಿದ್ಯಾರ್ಹತೆ, ಜಾತಿ ಮತ್ತು ಆದಾಯ, ರಹವಾಸಿ ಪ್ರಮಾಣ ಪತ್ರ, ಪಡಿತರ ಚೀಟಿ, ಗುರುತಿನ ಚೀಟಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಹಾಗೂ 2 ಭಾವಚಿತ್ರದೊಂದಿಗೆ ನವೆಂಬರ್ 30 ರ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ನಮೂನೆಗಾಗಿ ಮಹಾನಗರ ಪಾಲಿಕೆ ವೆಬ್ ಸೈಟ್ http://www.hdmc.mrc.gov.in ಸಂಪರ್ಕಿಸಬಹುದು ಎಂದು ಪಾಲಿಕೆ ಆಯುಕ್ತ ಡಾ.ಸುರೇಶ್ ಇಟ್ನಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kshetra Samachara
20/11/2020 05:19 pm