ಕುಂದಗೋಳ: ಉಕ್ರೇನ್ ದೇಶಕ್ಕೆ ವ್ಯಾಸಂಗ ಮಾಡಲು ತೆರಳಿ ಅಲ್ಲಿನ ಉದ್ವಿಗ್ನ ಸ್ಥಿತಿಯಲ್ಲಿ ಸಿಲುಕಿ ಸ್ವಗ್ರಾಮಕ್ಕೆ ಮರಳಿದ ಚೈತ್ರಾ ಸಂಶಿ ಅವರನ್ನು ಅಭಿನವ ಕಲ್ಯಾಣಪುರ ಬಸವಣ್ಣನವರು ಕುಂದಗೋಳ ತಾಲೂಕಿನ ಪ್ರಮುಖರ ಜೊತೆ ಸೇರಿ ಯರಗುಪ್ಪಿ ಅವರ ನಿವಾಸಕ್ಕೆ ಭೇಟಿ ನೀಡಿ ಅಭಿನಂದನೆ ಸಲ್ಲಿಸಿದ್ದಾರೆ.
ಯಾವಾಗ ಉಕ್ರೇನ್ ಸಂಧಿಗ್ಧ ಪರಿಸ್ಥಿತಿ ಆರಂಭವಾಯ್ತೋ ಅಂದಿನಿಂದ ಕ್ಷಣ ಕ್ಷಣದ ಮಾಹಿತಿ ತಿಳಿದು ಆತಂಕದಲ್ಲಿದ್ದ ಚೈತ್ರಾ ಸಂಶಿ ಪಾಲಕರಿಗೆ ಅಭಿನವ ಕಲ್ಯಾಣಪುರ ಬಸವಣ್ಣಜ್ಜನವರು ಮಗಳು ಮನೆ ತಲುಪಿದ ಬಗ್ಗೆ ಹರ್ಷ ವ್ಯಕ್ತಪಡಿಸಿ, ಸನ್ಮಾನ ಮಾಡಿ ಅಭಿನಂದಿಸಿದ್ದಾರೆ.
ಕುಂದಗೋಳ ತಾಲೂಕಿನ ಅನೇಕ ರಾಜಕೀಯ ಮುಖಂಡರು ಹಾಗೂ ಕೃಷಿ ಪತ್ತಿನ ಸಹಕಾರ ಸಂಘದ ಧುರೀಣರು, ವಿವಿಧ ಸಂಘಟನೆಗಳ ಕಾರ್ಯಕರ್ತರು ಅಭಿನವ ಕಲ್ಯಾಣಪುರ ಬಸವಣ್ಣನವರ ನೇತೃತ್ವದಲ್ಲಿ ಚೈತ್ರಾ ಸಂಶಿ ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿ, ಚೈತ್ರಾ ಸಂಶಿ ಅವರಿಂದ ಉಕ್ರೇನ್ ಸಂಧಿಗ್ಧ ಪರಿಸ್ಥಿತಿ ದಿನಗಳ ಮಾಹಿತಿ ತಿಳಿದುಕೊಂಡರು.
Kshetra Samachara
08/03/2022 12:33 pm