ಹುಬ್ಬಳ್ಳಿ: ಉಕ್ರೇನ್ ಹಾಗೂ ರಷ್ಯಾ ನಡುವಿನ ಯುದ್ಧ ಭಾರತವನ್ನು ಅಕ್ಷರಶಃ ಆತಂಕಕ್ಕೆ ಸಿಲುಕಿಸಿದೆ. ಕಳೆದೆರಡೂ ದಿನಗಳ ಹಿಂದೆಯಷ್ಟೆ ಹಾವೇರಿ ಜಿಲ್ಲೆಯ ಯುವಕ ಶೆಲ್ ದಾಳಿಗೆ ಬಲಿಯಾಗಿದ್ದು, ಎಲ್ಲರ ಕಣ್ಣಿನಲ್ಲಿಯೂ ಕಣ್ಣೀರು ಜಿನುಗಿದೆ. ಆದರೆ ಈಗ ಉಳಿದ ವಿದ್ಯಾರ್ಥಿಗಳ ಪಾಲಕರಲ್ಲಿ ಹೊಸ ಆಶಾಭಾವವೊಂದು ಮೂಡಿದೆ.
ಉಕ್ರೇನ್ ಯುದ್ಧ ಭೂಮಿಯಿಂದ ಇಬ್ಬರು ಹಾವೇರಿ ಜಿಲ್ಲೆಯ ವಿದ್ಯಾರ್ಥಿನಿಯರು ಹುಬ್ಬಳ್ಳಿಯ ಏರ್ಪೋರ್ಟ್ ಗೆ ಬಂದು ಇಳಿದಿದ್ದು, ಮಕ್ಕಳ ಮುಖ ನೋಡಿದ ಪಾಲಕರಲ್ಲಿ ಹೊಸ ಉತ್ಸಾಹ ಚಿಗುರೊಡೆದಿದೆ.
ಹಾವೇರಿ ಜಿಲ್ಲೆಯ ಇಬ್ಬರು ವಿದ್ಯಾರ್ಥಿನಿಯರು ಹುಬ್ಬಳ್ಳಿಗೆ ಆಗಮಿಸಿದ್ದಾರೆ. ಹಾನಗಲ್ಲಿನ ಶಿವಾನಿ ಮಡಿವಾಳರ ಹಾಗೂ ಜಿಲ್ಲೆಯ ಮತ್ತೊರ್ವ ವಿದ್ಯಾರ್ಥಿನಿ ತರೂರಿನ ರಂಜಿತಾ ಉಕ್ರೇನ್ ದಿಂದ ಆಗಮಿಸಿದ್ದಾರೆ.
ನಾಲ್ಕು ವರ್ಷದ ಹಿಂದೆಯಷ್ಟೆ ಉಕ್ರೇನ್ ಗೆ ಹೋದ ವಿದ್ಯಾರ್ಥಿನಿಯರು ಯುದ್ಧ ಭೂಮಿಯಿಂದ ತಾಯಿನಾಡಿಗೆ ಆಗಮಿಸಿದ್ದು, ಪಾಲಕರಲ್ಲಿ ಸಂತೋಷ ಉಕ್ಕಿ ಹರಿದಿದೆ. ಮಕ್ಕಳ ಆಗಮನದ ಬಗ್ಗೆ ಪಾಲಕರು ಹೇಳಿದ್ದು ಹೀಗೆ.
ಇನ್ನೂ ಹಾನಗಲ್ ತಾಲೂಕಿನ ಇಬ್ಬರೂ ವಿದ್ಯಾರ್ಥಿಗಳು ಸುರಕ್ಷಿತವಾಗಿ ತಾಯಿನಾಡಿಗೆ ಆಗಮಿಸಿದ್ದಾರೆ. ಈ ಬಗ್ಗೆ ಹಾನಗಲ್ ಕ್ಷೇತ್ರದ ಶಾಸಕ ಶ್ರೀನಿವಾಸ ಮಾನೆ ಮುತುವರ್ಜಿಯಿ ವಹಿಸಿ ಇಂತಹದೊಂದು ಕಾರ್ಯವನ್ನು ಮಾಡಿದ್ದಾರೆ ಎಂದು ಪಾಲಕರು ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೇ ಮಕ್ಕಳ ಬರುವಿಕೆಗಾಗಿ ಸಂಜೆಯಿಂದಲೇ ವಿಮಾನ ನಿಲ್ದಾಣದಲ್ಲಿ ಎದುರು ನೋಡುತ್ತಿದ್ದ ತಾಯಿ ಹೇಳಿರುವ ಮಾತನ್ನೊಮ್ಮೆ ಕೇಳಿ.
ಒಟ್ಟಿನಲ್ಲಿ ಯುದ್ಧ ಭೂಮಿಯಲ್ಲಿ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ವಿದ್ಯಾರ್ಥಿನಿಯರು ಇಬ್ಬರು ಭಾರತಕ್ಕೆ ಆಗಮಿಸಿದ್ದು, ಮಕ್ಕಳ ಆಗಮನ ಪಾಲಕರಿಗೆ ಮಾತ್ರವಲ್ಲದೆ ರಾಜ್ಯದ ಜನರಲ್ಲಿ ಆಶಾಭಾವನೆ ಚಿಗುರೊಡೆಯುವಂತೆ ಮಾಡಿದೆ.
-ಮಲ್ಲೇಶ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
Kshetra Samachara
03/03/2022 10:19 pm