ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳದ ಹುಡ್ಗಿ ಚೈತ್ರಾ ಮನೆಗೆ ಬರ್ತಿರೋದು ಪಕ್ಕಾ-ಫ್ಯಾಮಿಲಿ ಫುಲ್ ಖುಷ್

ಕುಂದಗೋಳ : ಎಂ.ಬಿ.ಬಿ.ಎಸ್ ವ್ಯಾಸಂಗಕ್ಕಾಗಿ ಉಕ್ರೇನ್ಗೆ ತೆರಳಿ ಅಲ್ಲಿನ ಸಂದಿಗ್ಧ ಸ್ಥಿತಿಯಲ್ಲಿ ಸಿಲುಕಿದ ವಿದ್ಯಾರ್ಥಿಗಳ ಪೈಕಿ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದ ಚೈತ್ರಾ ಸಂಶಿ ಮರಳಿ ತಾಯ್ನಾಡಿಗೆ ಆಗಮಿಸಲು ಈಗಾಗಲೇ ಪ್ರಯಾಣ ಬೆಳೆಸಿದ್ದಾರೆ ಎಂಬ ಸಿಹಿ ಸುದ್ದಿ ಜಿಲ್ಲಾಧಿಕಾರಿ ನಿತೇಶ್ ಪಟೇಲ್ ಮೂಲಕ ಪಾಲಕರನ್ನು ತಲುಪಿದೆ.

ಯಾವಾಗ ರಷ್ಯಾ ಉಕ್ರೇನ್ ಕದನ ಸಮರ ಆರಂಭವಾಯ್ತೋ, ಅಂದಿನಿಂದ ಕ್ಷಣ ಕ್ಷಣ ಒಂದೊಂದು ಮಾಹಿತಿ ತಿಳಿದು ಆತಂಕದಲ್ಲಿದ್ದ ಚೈತ್ರಾ ಸಂಶಿ ತಂದೆ ಗಂಗಾಧರ ಸಂಶಿ ಹಾಗೂ ಕುಟುಂಬಸ್ಥರು ಈಗ ಸಂತೋಷಕ್ಕೆ ಪಾರವೇ ಇಲ್ಲ. ಕಾರಣ "ಮಗಳು ಮನೆಗೆ ಬರಲು ಪ್ರಯಾಣ ಬೆಳೆಸಿದ್ದಾಳೆ" ಎಂಬ ಜಿಲ್ಲಾಧಿಕಾರಿ ನಿತೇಶ್ ಪಟೇಲ್ ಸಂದೇಶ ಡಬಲ್ ಟ್ರಿಪಲ್ ಮಾಡಿದೆ.

ಇಂದು ಸಾಯಂಕಾಲ ಯರಗುಪ್ಪಿಯ ಚೈತ್ರಾ ಸಂಶಿ ಕುಟುಂಬದವರನ್ನು ಭೇಟಿ ಮಾಡಿದ ಜಿಲ್ಲಾಧಿಕಾರಿ, ಚೈತ್ರಾ ಸಂಶಿಗೆ ವೀಡಿಯೋ ಕರೆ ಮಾಡಿ ಪಾಲಕರ ಜೊತೆ ಮಾತನಾಡಿಸಿ, ಮಗಳು ಮರಳಿ ಮನೆಗೆ ಬರುವ ವಿಷಯ ತಿಳಿಸಿದ್ದಾರೆ.

ಮಗಳು ಮರಳಿ ಮನೆಗೆ ಬರ್ತಿರೋ ವಿಷಯ ತಿಳಿದ ಕುಟುಂಬಸ್ಥರು, ಭಾರತ್ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಧನ್ಯವಾದ ಸಲ್ಲಿಸಿ, ಜಿಲ್ಲಾಡಳಿತ ನಮ್ಮ ಕಷ್ಟದಲ್ಲಿ ಸಂಪೂರ್ಣ ಸಹಕಾರ ನೀಡಿದೆ ಎಂದರು.

ಈ ಸಂದರ್ಭದಲ್ಲಿ ಕುಂದಗೋಳ ತಹಶೀಲ್ದಾರ ಅಶೋಕ್ ಶಿಗ್ಗಾಂವಿ, ಸಿಪಿಐ ಎನ್.ಎಮ್.ದೇಶನೂರು, ಹಾಗೂ ಕಾಂಗ್ರೆಸ್ ಮುಖಂಡ ರಮೇಶ್ ಕೊಪ್ಪದ, ಯರಗುಪ್ಪಿ ಗ್ರಾಮಸ್ಥರು ಉಪಸ್ಥಿತರಿದ್ದು ಪಾಲಕರಿಗೆ ಧೈರ್ಯ ತುಂಬಿದ್ದಾರೆ.

-ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್

Edited By : Shivu K
Kshetra Samachara

Kshetra Samachara

02/03/2022 10:47 pm

Cinque Terre

28.3 K

Cinque Terre

4

ಸಂಬಂಧಿತ ಸುದ್ದಿ