ಹುಬ್ಬಳ್ಳಿ: ಮಳೆ ನಿಂತರೂ ಮರದ ಹನಿಯು ನಿಲ್ಲುವುದಿಲ್ಲ ಎಂಬುವಂತೇ ಹುಬ್ಬಳ್ಳಿಯಲ್ಲಿ ವರುಣನ ಅವಾಂತರ ನಿಜಕ್ಕೂ ಜನಜೀವನಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಹೌದು. ವಾಣಿಜ್ಯನಗರಿಯಲ್ಲಿ ನಿನ್ನೆ (ಸೋಮವಾರ) ಬಿಡದೇ ಸುರಿದ ಮಳೆಯಿಂದ ಹುಬ್ಬಳ್ಳಿಯ ದಾಜಿಬಾನ್ ಪೇಟೆಯಲ್ಲಿರೋ ಕಮರ್ಷಿಯಲ್ ಕಾಂಪ್ಲೆಕ್ಸ್ ಪಾರ್ಕಿಂಗ್ ಜಾಗದಲ್ಲಿ ಕಾರುಗಳು ಮುಳಗಿದ್ದು, ಐದಕ್ಕೂ ಹೆಚ್ಚು ಕಾರು, ದ್ವಿಚಕ್ರ ವಾಹನಗಳು ನೀರಿನಲ್ಲಿ ಮುಳುಗಡೆಯಾಗಿವೆ.
ಇನ್ನೂ ಹೊಸ ಕಾರುಗಳು ನೀರಿನಲ್ಲಿ ಮುಳುಗಡೆಯಾಗಿದ್ದು, ಪಾರ್ಕಿಂಗ್ ಜಾಗದಲ್ಲಿ ಸುಮಾರು ಮೂರು ಅಡಿಯಷ್ಟು ನೀರು ಬಂದಿದೆ. ಅಲ್ಲದೇ ಕಾರು ಹೊರ ತಗೆಯಲು ಹರಸಾಹಸ ಪಡುತ್ತಿದ್ದು, ರಾಜಕಾಲುವೆ ದುರಸ್ಥಿ ಮಾಡದೆ ಇರುವುದೇ ಇದಕ್ಕೆಲ್ಲ ಕಾರಣ ಎಂದು ಸ್ಥಳೀಯರ ಆಕ್ರೋಶ ಹೊರಹಾಕುತ್ತಿದ್ದಾರೆ.
Kshetra Samachara
11/10/2022 01:32 pm