ನವಲಗುಂದ : ಮಳೆ ಗ್ರಾಮೀಣ ಭಾಗದ ಜನರಿಗೆ ನುಂಗಲಾರದ ತುತ್ತಾಗಿ ಪರಿಣಾಮಿಸುತ್ತಿದೆ. ಅದಕ್ಕೆ ಪ್ರಮುಖ ಕಾರಣ ಹದಗೆಟ್ಟ ರಸ್ತೆ ಎಂದರೂ ತಪ್ಪಿಲ್ಲ. ದೃಶ್ಯಗಳಲ್ಲಿ ಕಾಣುವಂತೆ ಈ ರಸ್ತೆ ನವಲಗುಂದ ತಾಲ್ಲೂಕಿನ ಹೆಬ್ಬಾಳದಿಂದ ಶಿರಕೋಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುತ್ತದೆ. ಈಗ ಇದರ ದುಸ್ಥಿತಿಗೆ ಸಾರ್ವಜನಿಕರು ಸುಸ್ತಾಗಿ ಹೋಗಿದ್ದಾರೆ.
ಕಳೆದ ಏಳೆಂಟು ವರ್ಷಗಳಿಂದ ಇದೇ ಪರಿಸ್ಥಿತಿಯಲ್ಲಿ ಗ್ರಾಮಸ್ಥರಿದ್ದಾರೆ. ಶಿರಕೋಳದಿಂದ ಬಳ್ಳೂರ ರಸ್ತೆಗೆ ಎರಡು ಕೋಟಿ ಮಂಜೂರಾಗಿದ್ದು, ಬಳ್ಳೂರಿಂದ ಹೆಬ್ಬಾಳ ಹಾಗೂ ಹಾಲಕುಸುಗಲ್ ಗೆ ಸಂಪರ್ಕಿಸುವ ರಸ್ತೆಯ ನಿರ್ಮಾಣಕ್ಕಾಗಿ ಪ್ರವಾಹದ ಅಡಿಯಲ್ಲಿ ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದು ಲೋಕೋಪಯೋಗಿ ಅಧಿಕಾರಿಗಳು ತಿಳಿಸಿದ್ದಾರೆ.
-ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್, ನವಲಗುಂದ
Kshetra Samachara
04/10/2022 02:13 pm