ಹುಬ್ಬಳ್ಳಿ : ಉತ್ತರ ಕರ್ನಾಟಕದ ಹಾರ್ಟ್ ಆಫ್ ಸಿಟಿ ಎಂದೇ ಖ್ಯಾತಿ ಪಡೆದಿರುವ ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿನ ರಸ್ತೆಗಳ ಪರಿಸ್ಥಿತಿ ಹಾರ್ಟ್ ಅಟ್ಯಾಕ್ ಆಗುವಂತಿವೆ. ಇಲ್ಲಿನ ರಸ್ತೆಗಳ ದುಸ್ಥಿತಿಯನ್ನು ಬಾಲಕಿಯೊಬ್ಬಳು ವಿನೂತವಾಗಿ ಅರ್ಥೈಸಿದ್ದಾಳೆ.
ಹೌದು.. ಹುಬ್ಬಳ್ಳಿಯಲ್ಲಿ 9ವರ್ಷದ 2ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಹರ್ಷಿತಾ ಮೆಹರವಾಡೆ ಎನ್ನುವ ಬಾಲಕಿ ರಾಜಧಾನಿ ಕಾಲೋನಿಯಲ್ಲಿರುವ ರಸ್ತೆಯ ಅವ್ಯವಸ್ಥೆ ಕುರಿತು ಸಾಕ್ಷ್ಯಚಿತ್ರದ ಮೂಲಕ ಸಾಕ್ಷಿಕರಿಸಿದ್ದಾಳೆ. ದೇವತೆಯ ವೇಷದಲ್ಲಿ ರಸ್ತೆಯಲ್ಲಿ ನಡೆದ ಬರುವ ಹರ್ಷಿತಾ ಜನಪ್ರತಿನಿಧಿಗಳ ಗಮನ ಸೆಳೆದಿದ್ದಾಳೆ.
ಈಗಾಗಲೇ ಸಾಕಷ್ಟು ಸಮಸ್ಯೆಗಳನ್ನು ಹೊತ್ತು ಜನರು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು, ಯಾವ ಸಮಯದಲ್ಲಿ ಏನು ಬೇಕಾದರೂ ಆಗಬಹುದು ಎನ್ನುವ ಸಂದೇಶವನ್ನು ಈ ಬಾಲೆ ಸಾಕ್ಷ್ಯಚಿತ್ರದ ಮೂಲಕ ಸಾರಿದ್ದಾಳೆ. ಸದ್ಯ ಬಾಲಕಿಯ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದ್ದು, ಇನ್ನಾದರೂ ಜನಪ್ರತಿನಿಧಿಗಳು ಇಲ್ಲಿನ ರಸ್ತೆ ಅವ್ಯವಸ್ಥೆಯನ್ನು ಸುಧಾರಿಸುವರೆ ಎಂದು ಕಾದುನೋಡಬೇಕಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
03/10/2022 10:33 pm