ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕೈ ಕಮಲದ ತಿಕ್ಕಾಟದಲ್ಲಿ ನರಳುತ್ತಿರುವ ವಾರ್ಡ ನಂ 34ರ ಜನ

ಪಬ್ಲಿಕ್ ನೆಕ್ಸ್ಟ್ ವರದಿ- ಈರಣ್ಣ ವಾಲಿಕಾರ

ಹುಬ್ಬಳ್ಳಿ: ನಾವು ಮತ ಹಾಕಿ ಗೆಲ್ಲಿಸಿದ್ದೇವೆ. ಆದ್ರೆ ಸಮಸ್ಯೆಗಳ ಬಗ್ಗೆ ಹೇಳಲು ಹೋದ್ರೆ ಅದಕ್ಕೂ ನಮಗೂ ಏನು ಸಂಬಂಧವಿಲ್ಲದಂತೆ ಕಾರ್ಪೋರೇಟರ್ ಹಾಗೂ ಶಾಸಕರು ವರ್ತಿಸುತ್ತಿದ್ದಾರೆ. ಹೀಗಂತ ಜನರು ಚರಂಡಿ ಮುಂದೆ ನಿಂತು ಕಾರ್ಪೊರೇಟರ್ ಮತ್ತು ಶಾಸಕರ ವಿರುದ್ಧ ಕಿಡಿಕಾರುತ್ತಿರುವ ದೃಶ್ಯಗಳು ಕಂಡು ಬಂದಿದ್ದು, ವಾರ್ಡ್ ನಂಬರ್ 34 ರಲ್ಲಿ....

ವಾರ್ಡ್ ನಂಬರ್ 34 ರ ಜನರ ಸ್ಥಿತಿ ಸದ್ಯ ಅದೋಗತಿಯಾಗಿದೆ. ಆದ್ರೆ ಇಲ್ಲಿನ ಕಾರ್ಪೊರೇಟರ್ ಗಂಗಮ್ಮ ಗೌರಿ ಅವರು ಇತ್ತ ತಿರುಗಿ ಕೂಡ ನೋಡುತ್ತಿಲ್ಲವಂತೆ. ವಾರ್ಡ್ ನಂಬರ್ 34 ರಲ್ಲಿ ಬರುವ ಹುಬ್ಬಳ್ಳಿಯಲ್ಲಿ ಪ್ರಸಿದ್ಧಿ ಹೊಂದಿರುವ ಶ್ರೀ ಸಿದ್ಧಾರೂಢರ ಮಠದ ಪಕ್ಕದಲ್ಲಿನ ವಿಶಾಲ ನಗರ, ಆರೋಡ್ ಕಾಲೋನಿ ನಿವಾಸಿಗಳು, ಮನೆಯಲ್ಲೇ ಮೂಗು ಮುಚ್ಚಿಕೊಂಡು ಇರುವಂತಹ ಪರಿಸ್ಥಿತಿ ಎದುರಾಗಿದೆ. ಒಂದು ಕಡೆ ಚರಂಡಿ ಬ್ಲಾಕ್ ಆಗಿ ಕಾಲುವೆಯಂತೆ ಚರಂಡಿ ನೀರೆಲ್ಲ ಮನೆ ಮುಂದೆ ಬರುತ್ತಿದೆ. ಇನ್ನೊಂದೆಡೆ ಸರಿಯಾದ ಕಸದ ವಾಹನ ಬರದಿದ್ದ ಕಾರಣ ಮನೆ ಮುಂದೆ ಕಸದ ರಾಶಿಯೇ ತುಂಬಿದೆ. ಇಷ್ಟೆಲ್ಲಾ ಸಮಸ್ಯೆಗಳಿದ್ರೂ ಕಾರ್ಪೊರೇಟರ್ ಗಂಗಮ್ಮ ಗೌರಿ ಇತ್ತ ತಲೆ ಹಾಕಿಲ್ಲ. ಶಾಸಕ ಅರವಿಂದ್ ಬೆಲ್ಲದ ಕೂಡಾ ಗಮನ ಹರಿಸುತ್ತಿಲ್ಲ ಎಂದು ಇಲ್ಲಿನ ನಿವಾಸಿಗಳು ಆರೋಪ ಮಾಡುತ್ತಿದ್ದಾರೆ.

ಅಷ್ಟಕ್ಕೂ ಇಲ್ಲಿನ ಸಮಸ್ಯೆ ಬಗೆ ಹರಿಯದಕ್ಕೆ ಅಸಲಿ ವಿಷಯವೇ ಬೇರೆ ಇದೆ. ಮುಂಬರುವ ವಿಧಾನಸಭಾ ಚುನಾವಣೆಗೆ ಅರವಿಂದ್ ಬೆಲ್ಲದ ಅವರ ವಿರುದ್ಧ ಪಶ್ಚಿಮ ವಿಧಾನಸಭಾ ಕ್ಷೇತ್ರಕ್ಕೆ ನಾಗರಾಜ ಗೌರಿ ಅವರು ಭರ್ಜರಿ ತಯಾರಿ ನಡೆಸಿದ್ದಾರೆ. ಅದಕ್ಕಾಗಿ ಈ ಚರಂಡಿ ಸಮಸ್ಯೆಯನ್ನು ಬಗೆ ಹರಿಸುತ್ತಿಲ್ಲ ಎನ್ನುವುದು ಇಲ್ಲಿನ ಜನರ ಆಕ್ರೋಶ.

ಅದೇನೇ ಇದ್ರೂ ರಾಜಕೀಯ ಜಿದ್ದಾ ಜಿದ್ದಿಯಲ್ಲಿ ಜನ ಬಲಿಪಶುವಾಗಬಾರದು. ಆದಷ್ಟು ಬೇಗ ಜನರ ಸಮಸ್ಯೆಗಳನ್ನು ಬಗೆ ಹರಿಸಬೇಕಾಗಿದೆ.

Edited By : Manjunath H D
Kshetra Samachara

Kshetra Samachara

29/09/2022 05:28 pm

Cinque Terre

36.66 K

Cinque Terre

8

ಸಂಬಂಧಿತ ಸುದ್ದಿ