ನವಲಗುಂದ: ನವಲಗುಂದದ ಹಳೇ ತಾಲೂಕ ಕಚೇರಿ, ವಾರದ ದಿನಗಳಲ್ಲಿ ಜನ ಜಂಗುಳಿಯಿಂದ ಕೂಡಿದ ಸ್ಥಳ, ಹಲವು ಇಲಾಖೆಗೆ ಸಂಬಂಧ ಪಟ್ಟ ಕೆಲಸಗಳು ಇಲ್ಲಿ ನಡೆಯುತ್ತವೆ. ದಿನಕ್ಕೆ ನೂರಾರು ಜನರು ಭೇಟಿ ನೀಡುವ ಸರ್ಕಾರಿ ಕಚೇರಿ ಈಗ ಶಿಥಿಲಾವಸ್ಥೆಗೆ ತಲುಪಿರೋದು ಅಧಿಕಾರಿಗಳ ಕಣ್ಣಿಗೆ ಮರೆಯಾಗಿದೆಯಾ ಅನ್ನೋ ಮಾತುಗಳು ಈಗ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.
ಹೌದ.. ಮೊದಲು ನವಲಗುಂದ ತಾಲೂಕು ಕಚೇರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಈ ಕಚೇರಿ ಈಗ ಬೆರಳೆಣಿಕೆಯ ಇಲಾಖೆಗೆ ಸಂಬಂಧ ಪಟ್ಟ ಕೆಲಸಗಳು ಮಾತ್ರ ನಡೆಯುತ್ತವೆ. ಇದರ ಪ್ರವೇಶ ದ್ವಾರದ ಕಾಪೌಂಡ್ ಈಗ ಬೀಳುವ ಆತಂಕವನ್ನು ಎದುರಿಸುತ್ತಿದೆ. ಇನ್ನು ಕಚೇರಿ ಆವರಣದೊಳಗೆ ಹೋದ್ರೆ ಸ್ವಚ್ಛತೆಯ ಕೊರತೆ, ಅದರೊಂದಿಗೆ ಕಚೇರಿಯ ಮೇಲ್ಚಾವಣಿ ಸಹ ಬೀಳುವ ಆತಂಕ ಎದುರಿಸುತ್ತಿದೆ. ಕೆಳಗಿನ ಕಟ್ಟಿಗೆಗಳು ಮುರಿದಿವೆ. ಅವಘಡ ಸಂಭವಿಸಿದ್ದಲ್ಲಿ ಹೊಣೆ ಯಾರು ಎಂಬ ಪ್ರಶ್ನೆ ಈಗ ಹುಟ್ಟಿಕೊಂಡಿದೆ.
ಕಚೇರಿಯಲ್ಲಿನ ದಾಖಲೆಗಳು, ಕಂಪ್ಯೂಟರ್ ಸೇರಿದಂತೆ ಸಲಕರಣೆಗಳು ಸುರಕ್ಷಿತವಾಗಿಲ್ಲ ಎಂಬುದು ದೃಶ್ಯಗಳಿಂದ ಸ್ಪಷ್ಟವಾಗುತ್ತಿದೆ. ಸಾರ್ವಜನಿಕರೊಂದಿಗೆ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೂ ಅಸುರಕ್ಷೆ ಕಾಡುತ್ತಿದೆ. ಈ ಬಗ್ಗೆ ತಾಲೂಕಾ ದಂಡಾಧಿಕಾರಿಗಳಾದ ಅನೀಲ ಬಡಿಗೇರ ಅವರು ಗಮನ ಹರಿಸಬೇಕಿದೆ.
-ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ
Kshetra Samachara
25/09/2022 04:48 pm