ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಾರ್ಡ್ ನಂ. 39 ರ ಸಮಸ್ಯೆಗಳಿಗೆ ಸೀಮೆಯೇ ಇಲ್ಲ ...ಏಕೆಂದ್ರೆ ಇಲ್ಲಿಯ ಕಾರ್ಪೊರೇಟರ್ ಸೀಮಾ ಮುಗಲಿಶೆಟ್ಟರ್

ಅಯ್ಯೋ ನೋಡಿ ನಮ್ಮ ನರಕ ಯಾತನೆ. ಇದಕ್ಕಾಗಿಯೇ ನಾವು ಈ ಕಾರ್ಪೊರೇಟರ್ ನ್ನು ಎಲೆಕ್ಟ್ ಮಾಡಿ ಕಳಿಸಬೇಕಿತ್ತಾ? ಅಂತ ಕೇಳ್ತಾ ಇದ್ದಾರೆ ಹುಬ್ಬಳ್ಳಿ ಧಾರವಾಡ ಮಹಾನಗರದ 39 ನೇ ವಾರ್ಡಿನ ಜನತೆ.

ಈ ವಾರ್ಡಿನ ವ್ಯಾಪ್ತಿಗೆ ಬರುವ ಶಿರಡಿನಗರದ ಗಿರಿರಾಜನಗರದಲ್ಲಿನ ಸಮಸ್ಯೆಗಳು ವರ್ಣಾತೀತ. ತಾವು ಅನುಭವಿಸುತ್ತಿರುವ ನೋವನ್ನು ಕೇಳಲು ಕಾರ್ಪೊರೇಟರ್ ಸೀಮಾ ಸಿದ್ದು ಮುಗಲಿಶೆಟ್ಟರ್ ಅವರಿಗೆ ಟೈಮೇ ಇಲ್ಲ ಅಂತ ಜನ ದೂರುತ್ತಿದ್ದಾರೆ.

ಸರಿಯಾದ ರಸ್ತೆಯಿಲ್ಲ...ರಸ್ತೆ ಇದ್ದರೆ ಗಟಾರು ಚರಂಡಿ ಇಲ್ಲ. ಒಂದು ಚಿಕ್ಕ ಮಳೆ ಬಂದ್ರೆ ಸಾಕು ಚರಂಡಿ ನೀರೆಲ್ಲ ಮನೆ ಒಳಗೇ.

ಶ್ರೀಮತಿ ಸೀಮಾ ಮುಗಲಿಶೆಟ್ಟರ್ ಇಲ್ಲಿನ ಕಾರ್ಪೊರೇಟರ್.. ಆದ್ರೂ ಗಂಡ ಸಿದ್ದು ಮುಗಲಿಶೆಟ್ಟರ್ ಅವರದೇ ಎಲ್ಲ ಕಾರಬಾರು ಎಂಬುದು ಸ್ಥಳೀಯರ ಆರೋಪ.

ಅವಳಿನಗರದ ವಾರ್ಡುಗಳ ದುಸ್ಥಿತಿ ಮೇಲೆ ಬೆಳಕು ಚೆಲ್ಲುವ ಪಬ್ಲಿಕ್ ನೆಕ್ಸ್ಟ್ ಮಾಧ್ಯಮ ಆರಂಭಿಸಿರುವ "ಮಹಾನಗರವೋ ಮಹಾನಗರಕವೋ'' ಎಂಬ ಮಾಲಿಕೆಗೆ ಜನತೆಯಿಂದ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು. ಈ ಹಿನ್ನೆಯಲ್ಲಿ 39 ನೇ ವಾರ್ಡಿನ ಜನತೆಯ ಮನದಾಳದ ಮಾತನ್ನು ನಾಳೆ ನಿಮ್ಮಮುಂದೆ ಇಡಲಿದ್ದೇವೆ.

Edited By :
Kshetra Samachara

Kshetra Samachara

22/09/2022 01:18 pm

Cinque Terre

9.32 K

Cinque Terre

3

ಸಂಬಂಧಿತ ಸುದ್ದಿ