ಹುಬ್ಬಳ್ಳಿ: ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದಲ್ಲಿ, 24 ಗಂಟೆಗಳ ಕಾಲ ನಿರಂತರ ನೀರು ಸರಬರಾಜು ಮಾಡುವ ಯೋಜನೆ ಹಮ್ಮಿಕೊಂಡಿದ್ದು, ಈಗಾಗಲೇ ಪೈಪ್ ಅಳವಡಿಕೆ ಕಾಮಗಾರಿ ಆರಂಭವಾಗಿದೆ.
ಗ್ರಾಮ ಪಂಚಾಯತಿ ಪ್ರತಿಯೊಂದು ವಾರ್ಡ್‌ನಲ್ಲಿ ಸಹ ನೀರಿನ ಪೈಪ್ ಅಳವಡಿಕೆ ಮಾಡುವುದರ ಜೊತೆಗೆ, 24 ಗಂಟೆಗಳ ಕಾಲ ಸಿಹಿ ನೀರು ನೀಡುವ ಗುರಿ ಹೊಂದಿದ್ದಾರೆ. ಆದರೆ ಈ ಯೋಜನೆಯಿಂದ ನೀರು ಪೋಲು ಆಗುವುದರ ಜೊತೆಗೆ ಗ್ರಾಮಸ್ಥರ ಸಮಸ್ಯೆ ಆಗುವ ಚಾನ್ಸ್ ಇದೆ. ಯಾಕೆಂದರೆ ತಿಂಗಳಿಗೆ ನೀರಿನ ಬಿಲ್ ಜಾಸ್ತಿ ಬರುವುದು ಸಾಧ್ಯತೆ ಇದೆ. ನೀರು ಬಳಕೆ ಮಾಡಿದರು ಮತ್ತು ಮಾಡದಿದ್ದರೂ ತಿಂಗಳಿಗೆ ಇಷ್ಟು ಹಣ ಅಂತ ಪಾವತಿ ಮಾಡಬೇಕಾಗುತ್ತೆ. ಆದ್ದರಿಂದ ಬಿಲ್ ಎಷ್ಟು ಬರುತ್ತೆ? ಪ್ರತಿಯೊಂದಕ್ಕೂ ಹಣ ನೀಡಬೇಕಲ್ಲ? ಎಂಬ ಆತಂಕ ಗ್ರಾಮಸ್ಥರಿಗೆ ಎದುರಾಗಿದೆ.
Kshetra Samachara
20/09/2022 12:05 pm