ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ರಾತ್ರಿಯಿಡಿ ಬಸ್ ಮುಂದೆ ಕುಳಿತು ಶಾಲಾ ಮಕ್ಕಳು ಪ್ರತಿಭಟನೆ; ಡೋಂಟ್ ಕೇರ್ ಎಂದ ಅಧಿಕಾರಿಗಳು

ಹುಬ್ಬಳ್ಳಿ: ಸರಿಯಾದ ಸಮಯಕ್ಕೆ ಬಸ್‌ ವ್ಯವಸ್ಥೆ ಇಲ್ಲದೆ ಕಾರಣ ಶಾಲಾ ಮಕ್ಕಳೆ ಸೇರಿ ಇಡೀ ಗ್ರಾಮಸ್ಥರು ರಾತ್ರಿ ವೇಳೆ ಬಸ್ ತಡೆದು ಪ್ರತಿಭಟನೆ ಮಾಡಿದ ಘಟನೆ ಹುಬ್ಬಳ್ಳಿ ತಾಲ್ಲೂಕಿನ ಅಗಡಿ ಗ್ರಾಮದಲ್ಲಿ ನಡೆದಿದೆ.

ಹೌದು. ಈ ಗ್ರಾಮಕ್ಕೆ ಸುಮಾರು ವರ್ಷಗಳಿಂದ ಬಸ್‌ಗಳು ಇಲ್ಲದೆ ಶಾಲಾ ಮಕ್ಕಳು ಗ್ರಾಮಸ್ಥರು ಪರದಾಡುತ್ತಿದ್ದರು. ಸರಿಯಾದ ಸಮಯಕ್ಕೆ ಬನ್ನಿ ಸರ್ ಎಂದು ವಿದ್ಯಾರ್ಥಿಗಳು ಬಸ್ ಕಂಡಕ್ಟರ್‌ಗೆ ಕೇಳಿದ್ರೆ ನಿಮ್ಮ ಪಾಸ್ ಕೊಡಿ ನಿಮ್ಮ ದುಡ್ಡು ಕೊಡುತ್ತೆವೆ ಎಂದು ಬೆದರಿಕೆ ಹಾಕಿದ್ದಾರಂತೆ. ಇದಕ್ಕೆ ಆಕ್ರೋಶಗೊಂಡ ಶಾಲಾ ಮಕ್ಕಳು ಮತ್ತು ಗ್ರಾಮಸ್ಥರು ರಾತ್ರಿ ವೇಳೆ ಬಸ್ ತಡೆದು ಇನ್ನೂ ಹೆಚ್ಚಿನ ಬಸ್‌‌ಗಳ ವ್ಯವಸ್ಥೆಬೇಕೆಂದು ಬಸ್ ಮುಂದೆ ಕುಳಿತು ವಿದ್ಯಾರ್ಥಿಗಳು ಕಣ್ಣೀರು ಹಾಕುತ್ತ ಪ್ರತಿಭಟನೆ ಮಾಡಿದರು.

ಅಗಡಿ ಗ್ರಾಮದಿಂದ ಹೈಸ್ಕೂಲ್ ವಿದ್ಯಾಭ್ಯಾಸಕ್ಕೆ ಐದು ಕಿಲೋಮೀಟರ್ ದೂರದಲ್ಲಿನ ಅರಳಿಕಟ್ಟಿ ಗ್ರಾಮಕ್ಕೆ ತೆರಳಬೇಕು. ಶಾಲೆ ಸಂಜೆ ಐದು ಗಂಟೆಗೆ ಬಿಟ್ಟರೂ ಬಸ್ ಇಲ್ಲದ ಕಾರಣ ರಾತ್ರಿ ಹತ್ತು ಗಂಟೆಗೆ ಮನೆ ಸೇರಲಿರುವ ವಿದ್ಯಾರ್ಥಿಗಳು, ಇದರಿಂದಾಗಿಯೇ ಬೇಸತ್ತು ಬಸ್‌‌ಗಾಗಿ ಪ್ರತಿಭಟನೆ ಮಾಡಿದ್ದಾರೆ. ಕೂಡಲೆ ಕೆಎಸ್ಆರ್‌ಟಿ ಅಧಿಕಾರಿಗಳು ಈ ಗ್ರಾಮಕ್ಕೆ ಬಸ್ ವ್ಯವಸ್ಥೆ ಮಾಡಬೇಕಾಗಿದೆ.

Edited By : Shivu K
Kshetra Samachara

Kshetra Samachara

16/09/2022 11:28 am

Cinque Terre

23.52 K

Cinque Terre

1

ಸಂಬಂಧಿತ ಸುದ್ದಿ