ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಗಣೇಶನಗರದ ಜನರನ್ನು ಗಣಪತಿಯೇ ಕಾಯಬೇಕು : ರಸ್ತೆ ನೋಡ್ರಿ ಕೆಸರು ಗದ್ದೆ ಆಗಿದೆ ನೋಡ್ರಿ...!

ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಅವಳಿನಗರದ ಜನರ ಸಮಸ್ಯೆ ಹೇಗಾಗಿದೆ ಅಂದರೆ. ಕೆಸರಲ್ಲಾದರೂ ಹಾಕು, ಗುಂಡಿಯಲ್ಲಾದರೂ ಹಾಕು ಮೊದಲು ಮನೆಗೆ ಸಾಗಾಕು ಎಂಬುವಂತಾಗಿದೆ. ಯಾಕೆ ಅಂದರೆ ಈ ಕೆಸರು ತುಂಬಿದ ರಸ್ತೆಯಲ್ಲಿ ಬಿದ್ದು ಮೂಳೆ ಮುರಿದುಕೊಳ್ಳುವ ಮುನ್ನ ಮನೆ ಮುಟ್ಟಿಸು ಅಂತ ದೇವರಲ್ಲಿ ಪ್ರಾರ್ಥನೆ ಮಾಡುವಂತಾಗಿದೆ.

ಸತತ ಮಳೆ ಹಿನ್ನೆಲೆ ಕೆಸರು ಗದ್ದೆಯಂತಾದ ಗಣೇಶ್ ನಗರದ ರಸ್ತೆಗಳು. ಹುಬ್ಬಳ್ಳಿಯ ಸಿದ್ಧಾರೂಢ ಮಠದ ಹಿಂಬದಿಯಲ್ಲಿರುವ ಗಣೇಶ ನಗರ. ಹೌದು.. ಗಣೇಶ ನಗರದ ಬಹುತೇಕ ರಸ್ತೆಗಳಲ್ಲಿ ಅಡ್ಡಾಡಲಾರದ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಒಂದೂವರೆ ವರ್ಷದ ಹಿಂದೆ ಮಾಡಿದ್ದ ಡ್ರೈನೇಜ್ ಕಾಮಗಾರಿ ನಂತರ ಮಣ್ಣು ಹಾಕಿ ಕೈತೊಳೆದುಕೊಂಡಿರೋ ಪಾಲಿಕೆಯ ನಡೆಯಿಂದ ಅವ್ಯವಸ್ಥೆ ತಲೆ ಎತ್ತಿದೆ. ಮಣ್ಣನ್ನೂ ಸಮತಟ್ಟು ಮಾಡದೆ ಹಾಗೆಯೇ ಹೋಗಿದ್ದು, ಹೀಗಾಗಿ ರಸ್ತೆಯ ಮೇಲೆ ಜನ ಸಂಚರಿಸಲಾರದ ಸ್ಥಿತಿ ನಿರ್ಮಾಣವಾಗಿದೆ.

ಇನ್ನೂ ಮಳೆ ಬಂದಾಗಲೆಲ್ಲಾ ಕೆಸರು ಗದ್ದೆಗಳಂತೆ ಮಾರ್ಪಡುತ್ತಿರೋ ರಸ್ತೆಗಳಿಂದ ಇಲ್ಲಿ ವಾಹನಗಳು ಅಡ್ಡಾಡುವುದೇ ದುಸ್ಥರವಾಗಿದೆ. ವಾಹನಗಳನ್ನು ದೂರದಲ್ಲಿ ಬಿಟ್ಟು ಮನೆಗೆ ಹೋಗುವ ಅನಿವಾರ್ಯತೆ ಉಂಟಾಗಿದ್ದು, ನಿತ್ಯ ನರಕ ಅನುಭವಿಸುತ್ತಿರುವ ಗಣೇಶ ನಗರದ ಜನತೆಯ ಗೋಳು ಹೇಳ ತೀರದಾಗಿದೆ. ಇಲ್ಲಿನ ಜನತೆ ಪ್ರಧಾನಿ ಮೋದಿ ಅವರಿಗೂ ಪತ್ರ ಬರೆದಿದ್ದಾರೆ.

ಆದರೂ ರಸ್ತೆ ದುರಸ್ತಿಯಾಗದೆ ಉಳಿದಿರುವ ಹಿನ್ನೆಲೆಯಲ್ಲಿ ಪಾಲಿಕೆ ಕಾರ್ಯವೈಖರಿಗೆ ಜನತೆಯ ಆಕ್ರೋಶ ವ್ಯಕ್ತಪಡಿಸಿದ್ದು, ಈಗಲಾದ್ರೂ ರಸ್ತೆ ಸರಿಮಾಡಿಕೊಡುವಂತೆ ಆಗ್ರಹಿಸಿದ್ದಾರೆ.

Edited By :
Kshetra Samachara

Kshetra Samachara

13/09/2022 08:30 pm

Cinque Terre

92.1 K

Cinque Terre

2

ಸಂಬಂಧಿತ ಸುದ್ದಿ