ಪಬ್ಲಿಕ್ ನೆಕ್ಸ್ಟ್ ವರದಿ- ಈರಣ್ಣ ವಾಲಿಕಾರ
ಹುಬ್ಬಳ್ಳಿ: ಈ ರಸ್ತೆಯನ್ನು ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ನಿರ್ಮಾಣ ಮಾಡಿದ್ದಾರೆ. ಆದ್ರೆ ಒಂದು ಚಿಕ್ಕ ಮಳೆ ಬಂದ್ರೆ ಸಾಕು ಮಳೆ ನೀರೆಲ್ಲ ರಸ್ತೆ ಮಧ್ಯದಲ್ಲೇ ನಿಲ್ಲುತ್ತದೆ. ಇದರಿಂದಾಗಿ ಪ್ರಯಾಣಿಕರು ಮತ್ತು ಅಲ್ಲಿನ ನಿವಾಸಿಗಳು ಕೈಯಲ್ಲಿ ಜೀವ ಹಿಡಿದುಕೊಂಡು ಓಡಾಡುವಂತಹ ಪರಿಸ್ಥಿತಿ ಎದುರಾಗಿದೆ...
ಒಂದು ಕಡೆ ರಸ್ತೆ ಮಧ್ಯದಲ್ಲೇ ನೀರು ನಿಂತಿರುವುದು. ಮತ್ತೊಂದೆಡೆ ಮನೆ ಒಳಗೆ ನೀರು ನುಗ್ಗುತ್ತಿರುವುದು. ಇವೆಲ್ಲ ದೃಶ್ಯಗಳು ಕಂಡು ಬಂದಿದ್ದು, ವಾರ್ಡ್ ನಂಬರ್ 48 ರಲ್ಲಿರುವ ಸಿದ್ದೇಶ್ವರ ಪಾರ್ಕ್ ರಸ್ತೆಯಲ್ಲಿ. ಈ ರಸ್ತೆಯನ್ನು ಸಿಆರ್‌ಎಫ್ ಅನುದಾನದಡಿಯಲ್ಲಿ ಇಂಡಿಪಂಪ್ ನಿಂದ ಲಿಂಗರಾಜ ನಗರ ಉಣಕಲ್ ಮುಖ್ಯ ರಸ್ತೆವರೆಗೆ ಮಾಡಿದ್ದಾರೆ. ಆದ್ರೆ ಮಳೆ ನೀರು ಹೋಗಲು ಜಾಗ ಬಿಡದ ಕಾರಣ ನೀರೆಲ್ಲ ರಸ್ತೆಯಲ್ಲಿ ನಿಲ್ಲುತ್ತಿದೆ. ಇದರಿಂದ ಮನೆ ಒಳಗೆ ಕೂಡ ನೀರು ನುಗ್ಗುತ್ತಿದೆ. ಈ ಬಗ್ಗೆ ಪಾಲಿಕೆಗೆ ಮತ್ತು ಪಾಲಿಕೆ ಸದಸ್ಯ ಕಿಶನ್ ಬೆಳಗಾವಿಗೆ ತಿಳಿಸಿದ್ರೂ ಕೂಡ ಕ್ಯಾರೆ ಎನ್ನುತ್ತಿಲ್ಲ ಎಂದು ಇಲ್ಲಿನ ನಿವಾಸಿಗಳು ಫುಲ್ ಗರಂ ಆಗಿದ್ದಾರೆ.
ಒಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಈ ಸ್ಥಳಕ್ಕೆ ಭೇಟಿ ನೀಡಿ ಇಲ್ಲಿನ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ..
Kshetra Samachara
07/09/2022 01:32 pm