ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಳ್ನಾವರ: ನಿವೃತ್ತ ಯೋಧನಿಗೆ ಅದ್ದೂರಿ ಸ್ವಾಗತ

ಅಳ್ನಾವರ: ಭಾರತೀಯ ಸೇನೆಯಲ್ಲಿ 17 ವರ್ಷಗಳ ಕಾಲ ಸೇವೆ ಸಲ್ಲಿಸಿ,ಮರಳಿ ತನ್ನ ತವರೂರಿಗೆ ಆಗಮಿಸಿದ ವೀರ ಯೋಧನಿಗೆ ಗ್ರಾಮದ ಯುವಕರು,ಹಿರಿಯರು ಅದ್ದೂರಿಯಾಗಿ ಸ್ವಾಗತ ಮಾಡಿಕೊಂಡರು.

ಅಳ್ನಾವರ ತಾಲೂಕಿನ ಕೊಗಿಲಗೇರಿ ಗ್ರಾಮದ ಯುವಕ ರಾಜು.ಎನ್ ತೋರಗಲ್ ಎಂಬುವವರೆ ಭಾರತೀಯ ಸೇನೆಯಲ್ಲಿ 17 ವರ್ಷಗಳ ಕಾಲ ಸೇವೆ ಸಲ್ಲಿಸಿ,ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದರು.ಇದೀಗ ಸೇನೆಯಿಂದ ನಿವೃತ್ತಿ ಹೊಂದಿ,ತನ್ನ ತವರೂರಿಗೆ ಆಗಮಿಸಿದ ವೀರ ಯೋಧನನ್ನ,ಮನೆ ಮಗನನ್ನ ಅದ್ದೂರಿಯಾಗಿ ಬರಮಾಡಿಕೊಂಡರು.ಗ್ರಾಮದ ಮಹಿಳೆಯರು ಆರತಿ ಬೆಳಗಿ,ನೂರು ವರ್ಷ ಸುಖವಾಗಿ ಬಾಳಪ್ಪ ಎಂದು ಮನದುಂಬಿ ಹರಸಿದ್ದು ಕಂಡು ಬಂದಿತು.

ಇನ್ನು ನಿವೃತ್ತ ಯೋಧ ರಾಜು ತೋರಗಲ್ಲ ಅವರನ್ನ ಗ್ರಾಮದವರೆಲ್ಲ ಸೇರಿ ಊರೆಲ್ಲ ತಾಳ,ಮೇಳಗಳೊಂದಿಗೆ ಮೆರವಣಿಗೆ ಮಾಡಿ,ಗ್ರಾಮದ ದೇವಸ್ಥಾನದ ಎದರು ಕೇಕ್ ಕತ್ತರಿಸಿ ಸಿಹಿ ಹಂಚಿ ಸಂಭ್ರಮಿಸಿದರು.ಈ ಸಂದರ್ಭದಲ್ಲಿ ಮಾಜಿ ಸೈನಿಕರ ಅಜ್ಜಪ್ಪ ಕುರಬರ,ಶಿವಾಜಿ ಕುಣಕಿಕೊಪ್ಪ,ಪ್ರಸಾದ ಕುಣಕಿಕೊಪ್ಪ ಹಾಗೂ ಗ್ರಾಮಸ್ಥರಾದ ಮಹೇಶ ಬುಡರಕಟ್ಟಿ,ಅಶೋಕ ತಿರಕಣ್ಣವರ,ಸಂಜು,ಸಂಗಮೇಶ ಮತ್ತು ಹಿರಿಯರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

02/09/2022 06:59 am

Cinque Terre

7.79 K

Cinque Terre

0

ಸಂಬಂಧಿತ ಸುದ್ದಿ