ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ರಾಜ್ಯದ 2ನೇ ಮಹಾನಗರ ಸಮಸ್ಯೆ ಆಗರ; ಬಯಲೇ ಮೂತ್ರಾಲಯ!, ಎಲ್ಲಿದೆ? ಅಭಿವೃದ್ಧಿ ಶಿಖರ

ಹುಬ್ಬಳ್ಳಿ: "ಹುಬ್ಬಳ್ಳಿ" ಛೋಟಾ ಮುಂಬೈ, ಸ್ಮಾರ್ಟ್ ಸಿಟಿ, ಐಐಟಿ, ಐಐಐಟಿ, ಬಿಆರ್ ಟಿಎಸ್, ರಾಜ್ಯದ 2ನೇ ಮಹಾನಗರಿ ಹಾಗೂ ನಗರೋತ್ಥಾನ ಎಂಬ ಹೆಗ್ಗಳಿಕೆ ಜೊತೆಗೆ ಅತ್ಯಾಧುನಿಕ ತಂತ್ರಜ್ಞಾನದ ಊರು ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ. ಆದರೆ, ಇದಕ್ಕೆ ಅಪವಾದ ಎಂಬಂತೆ ಹತ್ತು ಹಲವಾರು ಸಮಸ್ಯೆಗಳ ಆಗರವಾಗಿದೆ.

ಹೌದು... ದಿನದಿಂದ ದಿನಕ್ಕೆ ಸ್ಮಾರ್ಟ್‌ಸಿಟಿ ಆಗುತ್ತಿರುವ ಹುಬ್ಬಳ್ಳಿ- ಧಾರವಾಡ ಮಹಾನಗರದಲ್ಲಿ ಜನಸಂದಣಿ ಹೆಚ್ಚುತ್ತಿದೆ. ಆದರೆ, ನಾಗರಿಕರ ಸೌಲಭ್ಯ ಮಾತ್ರ ಮರೀಚಿಕೆಯಾಗಿವೆ. ಪ್ರಮುಖ ರಸ್ತೆ, ವೃತ್ತಗಳಲ್ಲಿ ಮೂತ್ರ ವಿಸರ್ಜನೆಗೆ 'ಬಯಲೇ ಗತಿ'ಎಂಬ ಪರಿಸ್ಥಿತಿ ಇದೆ. ಮಹಾನಗರದಲ್ಲಿ ಒಟ್ಟು 29 ಸಾರ್ವಜನಿಕ ಮೂತ್ರಾಲಯಗಳಿವೆ.

ಪ್ರಮುಖ ಮಾರುಕಟ್ಟೆ, ಜನಸಂದಣಿ ಪ್ರದೇಶ ಗಮನಿಸಿದರೆ ಮೂತ್ರಾಲಯಗಳ ಸಂಖ್ಯೆ ಕಡಿಮೆಯೇ. ಅದರಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಜನಸಂದಣಿ ಉಂಟಾಗುವ ರಾಣಿ ಚೆನ್ನಮ್ಮ ವೃತ್ತದ ಸುತ್ತಮುತ್ತಲಿನಲ್ಲಿ ಒಂದೇ ಒಂದು ಸಾರ್ವಜನಿಕ ಮೂತ್ರಾಲಯ ಇಲ್ಲ!

ಇನ್ನೂ ನಿತ್ಯ ನೂರಾರು ನಾಗರಿಕರು ಮೂತ್ರ ವಿಸರ್ಜನೆಗೆ ಬಯಲನ್ನೇ ಅವಲಂಬಿಸಿದ್ದಾರೆ. ವಿವಿಧ ಜಿಲ್ಲೆ, ತಾಲೂಕು, ಗ್ರಾಮೀಣ ಭಾಗದಿಂದ ನಿತ್ಯ ಸಾವಿರಾರು ಜನರು ಮಹಾನಗರಕ್ಕೆ ಬರುತ್ತಾರೆ. ಸಾಕಷ್ಟು ಜನರು ಮೂತ್ರಾಲಯಕ್ಕೆ ಗೋಡೆ, ಗಿಡದ ಮರೆ ಅವಲಂಬಿಸಿದ್ದಾರೆ. ಇನ್ನು ಹಲವರಿಗೆ ಹಳೇ ಬಸ್‌ ನಿಲ್ದಾಣದಲ್ಲಿ ಶೌಚಾಲಯ ಇದೆ ಎಂಬ ಮಾಹಿತಿಯೇ ಇಲ್ಲದಂತಾಗಿದೆ.

ನಗರದಲ್ಲಿ ಈ ಹಿಂದೆ ಇದ್ದ ಸಾರ್ವಜನಿಕ ಮೂತ್ರಾಲಯಗಳಲ್ಲಿ ಕೆಲವು ಈಗಾಗಲೇ ಬಾಗಿಲು ಮುಚ್ಚುವ ಸ್ಥಿತಿ ತಲುಪಿವೆ. ಎಲ್ಲಿ ಹೆಚ್ಚಾಗಿ ಬಳಸಲಾಗುತ್ತಿದೆಯೋ ಅಲ್ಲಿ ಮಾತ್ರ ನಿರ್ವಹಣೆಗೆ ಪಾಲಿಕೆ ವ್ಯವಸ್ಥೆ ಮಾಡಿದೆ. ಉಳಿದೆಡೆ ಕಾಲಿಡುವ ಸ್ಥಿತಿಯಲ್ಲಿ ಮೂತ್ರಾಲಯಗಳು ಇಲ್ಲ‌ವಾಗಿವೆ.

Edited By : Shivu K
Kshetra Samachara

Kshetra Samachara

27/08/2022 06:48 pm

Cinque Terre

82.15 K

Cinque Terre

8

ಸಂಬಂಧಿತ ಸುದ್ದಿ