ಹುಬ್ಬಳ್ಳಿ: ಇಲ್ಲಿನ ನಿವಾಸಿಗಳು ಚರಂಡಿ ಸಮಸ್ಯೆಯಿಂದ ಸುಮಾರು ಎರಡು ತಿಂಗಳಿಂದ ಪರದಾಡುತ್ತಿದ್ದಾರೆ. ಸುತ್ತಮುತ್ತಲಿನ ಚರಂಡಿ ಬ್ಲಾಕ್ ಆದ ಕಾರಣ ಈ ಎರಡು ಬಡಾವಣೆಗಳ ಜನರ ಗೋಳು ಹೇಳತೀರದಾಗಿದೆ.
ಹೌದು... ಹೀಗೆ ರಸ್ತೆ ಮೇಲೆ ನಿಂತು ಚರಂಡಿ ಸಮಸ್ಯೆ ಸೇರಿದಂತೆ ಮೂಲಭೂತ ಸೌಕರ್ಯಗಳ ಕೊರತೆಯನ್ನು ಹೇಳುತ್ತಿರುವ ದೃಶ್ಯಗಳು ಕಂಡು ಬಂದಿದ್ದು, ನಗರದ ವಾರ್ಡ್ ನಂಬರ್ 48 ರಲ್ಲಿ ಬರುವ ಹೊಸ ಕೋರ್ಟ್ ಹಿಂಬದಿಯಲ್ಲಿರುವ ಕಲ್ಲೂರ ಲೇಔಟ್ ಮತ್ತು ಜವಳಿ ಗಾರ್ಡನ್ ನಲ್ಲಿ.
ಇಲ್ಲಿನ ನಿವಾಸಿಗಳು ಹಲವು ದಿನಗಳಿಂದಲೂ ಈ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಬಗ್ಗೆ ಕಾರ್ಪೊರೇಟರ್ ಕಿಶನ್ ಬೆಳಗಾವಿಗೆ ಹೇಳಿದರೆ ನಾಳೆ ಮಾಡಿಸುತ್ತೇನೆಂದು ಹಾರಿಕೆ ಉತ್ತರ ನೀಡುತ್ತಿದ್ದಾರಂತೆ. ಅಷ್ಟೇ ಅಲ್ಲದೆ, ಈ ಸಮಸ್ಯೆ ಬಗ್ಗೆ ಪಾಲಿಕೆಗೂ ಕೂಡ ಕಂಪ್ಲೇಟ್ ಮಾಡಿದರೂ ಯಾರು ಕೂಡ ಕ್ಯಾರೇ ಎನ್ನುತ್ತಿಲ್ಲವೆಂದು ಗರಂ ನಿವಾಸಿಗಳು ಆಗಿದ್ದಾರೆ.
ಕಾರ್ಪೊರೇಟರ್ ಕಿಶನ್ ಬೆಳಗಾವಿ ಅವರೇ, ಚುನಾಯಿತರಾಗಿ ಬಂದು ಅಧಿಕಾರವನ್ನು ಕೂಡ ಸ್ವೀಕಾರ ಮಾಡಿದ್ದೀರಿ. ಯಾಕೆ ಇನ್ನು ವಾರ್ಡ್ ಕೆಲಸ ಮಾಡುತ್ತಿಲ್ಲ? ಆದಷ್ಟು ಬೇಗ ಇಲ್ಲಿನ ಜನರ ಸಮಸ್ಯೆಗೆ ಸ್ಪಂದಿಸಿ, ಬಗೆಹರಿಸಿ.
Kshetra Samachara
20/08/2022 12:11 pm