ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಅಮೃತ ಸರೋವರ ಕೆರೆ ಪುನಶ್ಚೇತನ ಕಾಮಗಾರಿಗೆ ಭೂಮಿಪೂಜೆ

ಕುಂದಗೋಳ : ಸರ್ಕಾರದದಿಂದ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಅಮೃತ ಸರೋವರ ಯೋಜನೆಯಡಿ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮ ಪಂಚಾಯಿತಿ ಆಯ್ಕೆ ಮಾಡಿಕೊಂಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಯನ್ನು ಪರಿತೆಪ್ಪಿಸಲು ಹಾಗೂ ಅಂತರ್ಜಾಲ ಮಟ್ಟ ಸುದಾರಿಸಲು ಮಹತ್ವದ ಯೋಜನೆ ಯರಗುಪ್ಪಿ ಗ್ರಾಮ ಪಂಚಾಯತಿ ಆಯ್ಕೆ ಮಾಡಿಕೊಂಡಿದೆ.

ಹೌದು. ! ಕುಂದಗೋಳ ತಾಲೂಕಿನ ಬಹುದೊಡ್ಡ ಗ್ರಾಮವಾದ ಯರಗುಪ್ಪಿ ಗ್ರಾಮದಲ್ಲಿ ಅಮೃತ ಸರೋವರ ಯೋಜನೆಯಡಿಯಲ್ಲಿ ಕೆರೆ ಅಭಿವೃದ್ಧಿ ಪಡಿಸಲು ಮಹತ್ವದ ನಿರ್ಧಾರ ತೆಗದಕೂಂಡಿದೆ. ಕೆರೆ ಸುತ್ತಲು ಕಲ್ಲ ಪಿಚ್ಚಿಂಗ್, ಮತ್ತು ತಂತೀ ಬೇಲಿ ಅಳವಡಿಕೆ ಕರೆಯ ದಂಡಿನ ಮೇಲೆ ಪಿವರ್ಸ್ ಹಾಕಲಾಗುವುದು. ಕರೆಯ ದಂಡಿನ ಮೇಲೆ ಉದ್ಯಾನವ ಆಸನಗಳ ವ್ಯವಸ್ಥೆ. ಹೀಗೆ ಅಮೃತ ಸರೋವರ ಯೋಜನೆಯಡಿಯಲ್ಲಿ 39 ಲಕ್ಷ ವೆಚ್ಚದ ಕರೆ ಪುನಶ್ಚೇತನಕ್ಕೆ ಕಾಮಾಗಾರಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಚಾಲನೆ ನೀಡಿದರು.

ಈಗಾಗಲೇ ಟೆಂಡರ್ ಪ್ರಕ್ರಿಯೆ ಪ್ರಾರಂಭ ಹಂತದಲ್ಲಿ ಇದ್ದು . ಯರಗುಪ್ಪಿ ಗ್ರಾಮದ ಭವ್ಯವಾದ ಕೆರೆ ಅಭಿವೃದ್ಧಿ ಕಾಮಗಾರಿ ಬರೋಬ್ಬರಿ 39 ಲಕ್ಷದ ವೆಚ್ಚದಲ್ಲಿ ಕಾಮಗಾರಿ ಗುದ್ದಲಿ ಪೂಜೆ ನೇರವರೆಸಿದ್ದು. ಗ್ರಾಮ ಪಂಚಾಯಿತಿ ಅಧ್ಯಕ್ಷರು ಗುಣಮಟ್ಟದ ಕಾಮಗಾರಿ ಮಾಡಬೇಕೆಂದು ಗುತ್ತಿಗೆದಾರರಿಗೆ ನಿರ್ದೇಶಿಸಿದರು.

ಇದೇ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷರು ರೇಣುಕಾ ದುಂಡಿ ಗ್ರಾಪಂ ಉಪಾಧ್ಯಕ್ಷರಾದ ಶಿವಾನಂದ ಕುಸುಗಲ್, ಗ್ರಾಮ ಪಂಚಾಯಿತಿ ಸದಸ್ಯರಾದ ಭೀಮಣ್ಣ ಮಾಯಣ್ಣನವರ, ರವಿ ಕುಂಬಾರ, ಮಹೇಶ ಅಣ್ಣಿಗೇರಿ, ಶ್ರೀಕಾಂತ ಯಕ್ಕಣ್ಣವರ, ಚಂದ್ರಶೇಖರ ಮಡಿವಾಳರ, ಶಾರಾದ ಮಾದನೂರ ಸಾಹೆಬ್ಬಿ ಭದ್ರಾಪೂರ ಊರಿನ ಗ್ರಾಮಸ್ಥರು ಇದ್ದರು.

Edited By : PublicNext Desk
Kshetra Samachara

Kshetra Samachara

19/08/2022 01:14 pm

Cinque Terre

4.65 K

Cinque Terre

0

ಸಂಬಂಧಿತ ಸುದ್ದಿ