ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾದ ಯಮನೂರ ಬಸ್ ನಿಲ್ದಾಣ

ನವಲಗುಂದ: ಈ ದೃಶ್ಯಗಳಲ್ಲಿ ಕಾಣುತ್ತಿರುವ ಬಸ್ ನಿಲ್ದಾಣ ಜನರಿಗೆ ಪ್ರಯೋಜನಕ್ಕೆ ಬಾರದೇ, ಬೀದಿ ನಾಯಿಗಳ ಹಾಗೂ ಸರಕು ಇರಿಸಲಾಗುವ ಸ್ಥಳವಾಗಿ ಮಾರ್ಪಟ್ಟಿದೆ ಎಂಬ ಆರೋಪವಿದೆ. ಅದು ಯಾಕೆ ಅಂತೀರಾ ಈ ಸ್ಟೋರಿ ನೋಡಿ...

ಇದು ನವಲಗುಂದ ತಾಲ್ಲೂಕಿನ ಯಮನೂರ ಗ್ರಾಮದಲ್ಲಿನ ಬಸ್ ನಿಲ್ದಾಣ. ಭಾನುವಾರ, ಗುರುವಾರ ಯಮನೂರ ಚಾಂಗದೇವರ ವಿಶೇಷ ಪೂಜೆ ನಿಮಿತ್ತ ಜಾತ್ರೆಯ ಸಡಗರ ಇರುತ್ತೆ. ಈ ಹಿನ್ನೆಲೆ ಸದಾ ಜನದಟ್ಟಣೆ ಹೆಚ್ಚು. ದರ್ಶನಕ್ಕೆ ಬರುವಂತಹ ಜನರು ಬಸ್ ಗಾಗಿ ರಸ್ತೆ ಪಕ್ಕದಲ್ಲೇ ಕಾಯುತ್ತ ನಿಂತುಕೊಳ್ಳಬೇಕಾದ ಅನಿವಾರ್ಯತೆ ಇಲ್ಲಿ ನಿರ್ಮಾಣವಾಗಿದೆ. ಕಾರಣ ಬಸ್ ಗಳ ನಿಲುಗಡೆ ಸಹ ರಸ್ತೆ ಮೇಲೆಯೇ ಆಗುತ್ತೆ.

ಬಸ್ ನಿಲ್ದಾಣ ಇದ್ರೂ ಸಹ ಪ್ರಯಾಣಿಕರು ಮಳೆ ಇರಲಿ, ಬಿಸಿಲಿರಲಿ ರಸ್ತೆಯ ಬದಿ ನಿಲ್ಲುತ್ತಾರೆ. ಇದರಿಂದ ವಾಹನ ದಟ್ಟಣೆ ಸಹ ಹೆಚ್ಚಾಗುತ್ತೆ. ಗ್ರಾಮಸ್ತರಿಗೆ ಇದು ಕಿರಿಕಿರಿ ಉಂಟು ಮಾಡುತ್ತಿದೆ. ಈ ಬಗ್ಗೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ಯಮನೂರ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ವೀರೇಶ್ ಗುಡುದುರಮಠ ಅವರ ಗಮನಕ್ಕೆ ತರಲಾಯಿತು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯಮನೂರ ಬಸ್ ನಿಲ್ದಾಣದ ಮುಂಭಾಗ ಡಾಂಬರೀಕರಣ ಮಾಡಿಸಲು ನವಲಗುಂದ ಬಸ್ ಡಿಪೋ ಹಾಗೂ ಪಿ ಡಬ್ಲ್ಯೂ ಡಿ ಇಲಾಖೆಗೆ ಪತ್ರ ಬರೆಯುತ್ತೇವೆ ಎಂದಿದ್ದಾರೆ.

ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್, ನವಲಗುಂದ

Edited By : Manjunath H D
Kshetra Samachara

Kshetra Samachara

18/08/2022 03:17 pm

Cinque Terre

12.32 K

Cinque Terre

0

ಸಂಬಂಧಿತ ಸುದ್ದಿ