ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡದಾಗ ಹೆಂಗ ಆಗೈತಿ ಅಂದರೆ ಜನರು ಯಾವ ಹೊತ್ತಿನ್ಯಾಗ ಏನ ಆಕೈತೋ ಅಂತ ಕೈಯಾಗ ಜೀವ ಹಿಡಿದುಕೊಂಡು ಡೆಂಜರ್ ಝೋನ್ ಒಳಗ ಓಡಾಡ್ತಿದ್ದಾರೆ. ಯಾಕೆಂದರೆ ಎಲ್ಲಿ ಏನ ಐತೋ. ಯಾವಾಗ ಕರೆಂಟ್ ಶಾಕ್ ಹೊಡಿತೈತೋ ಅಂತ ಭಯದಾಗ ಹೊಂಟಾರ ನೋಡ್ರಿ..
ಹೌದು... ನೋಡ್ರಿ ಹುಬ್ಬಳ್ಳಿಯ ಮೂರುಸಾವಿರ ಮಠದ ಆವರಣದಾಗ ಹನ್ನೆರಡು ಕೆವಿ ಕರೆಂಟ್ ಟ್ರಾನ್ಸಫಾರ್ಮರ್ ದಿನಾಲು ಮನ್ಯಾಗಿನ ದೀಪ ಉರದಂಗ ಉರಿಯುತ್ತೇ. ಸ್ವಲ್ಪ ಯಾಮಾರಿದರೂ ಮನ್ಯಾಗ ಪೋಟೋ ಮುಂದೆ ದೀಪ ಹಚ್ಚೊದ್ದು ಗ್ಯಾರಂಟಿ. ಅರೇ ಯಾಕೆ ಅನಿಷ್ಟ ಮಾತಾಡ್ತಿರೀ ಅಂತಿರೀ ಹೌದಲ್ಲೋ... ನಮಗೂ ಹಿಂಗ ಮಾತಾಡೋಕೆ ಬೇಸರ ಅನಿಸುತ್ತೇ ಆದರೆ ಏನ ಮಾಡೋದು ರೀ ಇದ್ದಿದ್ದನ್ನ ಇದ್ದಂಗ ಹೇಳಿದ್ರೇ ಏನಾಗೋದಿದೆ ನೋಡ್ರಿ.
ಹೆಸ್ಕಾಂ ಸಿಬ್ಬಂದಿ ಮತ್ತು ಅಧಿಕಾರಿಗಳು ಸಾಕಷ್ಟು ಭರವಸೆ ಕೊಟ್ಟಾರ ಹುಬ್ಬಳ್ಳಿ ಧಾರವಾಡ ಹಂಗ ಮಾಡ್ತಿವಿ ಹಿಂಗ ಮಾಡ್ತಿವಿ ಅಂತ ಇಲ್ಲಿ ನೋಡಿದರೇ ನಿಜಕ್ಕೂ ಜನರು ಕೈಯಾಗ ಜೀವ ಹಿಡಕೊಂಡು ಓಡಾಡ್ತಿದ್ದಾರೆ.
ಇನ್ನ ಸಾಕಷ್ಟು ಸಲ ಪಬ್ಲಿಕ್ ನೆಕ್ಸ್ಟ್ ಮೂಲಕ ಹೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದರೂ ಏನೂ ಉಪಯೋಗ ಆಗಿಲ್ಲ. ತಮಗೆ ಏನು ತಿಳಿತೈತಿ ಅದನ್ನ ಮಾಡ್ತಾರೆ. ಏನೆನೋ ಕೆಲಸಕ್ಕ ಬಾರದ ಅಭಿಯಾನ ಮಾಡಿ ಜನರನ್ನು ಸುಮ್ಮನೆ ಮಾಡ್ತಾರೆ ನೋಡ್ರಿ.
ಇನ್ನಾದರೂ ಹೆಸ್ಕಾಂ ಅಧಿಕಾರಿಗಳು ಪಾಲಿಕೆ ಆಯುಕ್ತರ ಈ ಬಗ್ಗೆ ಕ್ರಮ ಜರುಗಿಸ ಮುಂದಿನ ದಿನದಾಗ ಆಗುವ ಅಪಘಾತ ತಡಿಬೇಕು ನೋಡ್ರಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
17/08/2022 06:34 pm