ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: 'ಕಾಸು ಕಟ್ಟಿ ಸುರಕ್ಷತೆ ಕೇಳಬೇಡಿ'; ಬೈಕ್ ಪಾರ್ಕಿಂಗ್ ಚಾರ್ಜ್ ಕಿರಿಕಿರಿ

ನವಲಗುಂದ: ಪಾರ್ಕಿಂಗ್ ವ್ಯವಸ್ಥೆ ಇದೆ. ಆದರೆ ಭದ್ರತೆ ವ್ಯವಸ್ಥೆ ಮಾತ್ರ ಕೇಳಬೇಡಿ. ಇದು ನವಲಗುಂದ ಬಸ್ ನಿಲ್ದಾಣದ ಅವ್ಯವಸ್ಥೆ..

ಅಚ್ಚುಕಟ್ಟಾದ ಪಾರ್ಕಿಂಗ್, ಸಾಲುಗಟ್ಟಿ ವ್ಯವಸ್ಥಿತವಾಗಿ ನಿಂತ ಬೈಕ್ ಗಳ ದೃಶ್ಯಗಳನ್ನು ನೋಡಿ ಇಲ್ಲಿ ಎಲ್ಲವು ಸರಿಯಾಗಿದೆ ಅಂದುಕೊಳ್ಳಬೇಡಿ. ಇಲ್ಲಿ ವಾಹನಗಳು ಶೆಡ್ ಇಲ್ಲದೆ ಬಿಸಿಲಿಗೆ ಮೈಯೊಡ್ಡಿ, ಸಿಸಿಟಿವಿ ಕ್ಯಾಮೆರಾ ಇಲ್ಲದೆ ಅಸುರಕ್ಷಿತವಾಗಿ ವಾಹನಗಳು ನಿಲ್ಲುತ್ತವೆ.

ಇನ್ನು ಬಸ್ ನಿಲ್ದಾಣದಲ್ಲಿವರು ಸ್ವಚ್ಛತೆ ಬಗ್ಗೆ ಮಾತನಾಡೋದೆ ಬೇಡ. ಇಲ್ಲಿ ನಿಲ್ಲಿಸುವ ದ್ವಿಚಕ್ರ ವಾಹನಗಳು ಭದ್ರವಾಗಿ ಇರುವುದಿಲ್ಲ ಎನ್ನುವ ಆರೋಪ ಸಾರ್ವಜನಿಕರದ್ದು.

ಯಾಕಂದ್ರೆ ಇಲ್ಲಿ ಪ್ರಮುಖವಾಗಿ ಸಿಸಿಟಿವಿ ಕ್ಯಾಮೆರಾ ಇಲ್ಲ, ಬೆಳಿಗ್ಗೆಯಿಂದ ಸಂಜೆವರೆಗೆ ಕಾವಲಿಗಿರುವ ಸಿಬ್ಬಂದಿ ವಾಹನಗಳನ್ನು ನೋಡಿಕೊಳ್ಳುತ್ತಾರೆ. ರಾತ್ರಿಯಾದರೆ ವಾಹನಗಳಿಗೆ ಕಾವಲಿಲ್ಲ. ದುಬಾರಿ ಪಾರ್ಕಿಂಗ್ ಚಾರ್ಜ್ ಇರುವ ಇಲ್ಲಿ ರಕ್ಷಣೆ ಮಾತ್ರ ಇಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ಇದರೊಂದಿಗೆ ಬಸ್ ನಿಲ್ದಾಣದಲ್ಲಿಯೂ ಸಹ ವಾಹನಗಳ ನಿಲುಗಡೆ ಮಾಡಲಾಗುತ್ತೆ, ಆದರೆ ಅದು ಕೂಡ ಪಾರ್ಕಿಂಗ್ ಸ್ಥಳವಂತೆ, ಈ ರೀತಿಯ ಪರಿಸ್ಥಿತಿ ಇದ್ದರೆ ಬಸ್ ಗಳ ಸಂಚಾರಕ್ಕೆ ಅಡೆತಡೆ ಉಂಟಾಗೋದಂತೂ ಸುಳ್ಳಲ್ಲ.

ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ

Edited By :
Kshetra Samachara

Kshetra Samachara

09/08/2022 05:25 pm

Cinque Terre

47.81 K

Cinque Terre

0

ಸಂಬಂಧಿತ ಸುದ್ದಿ