ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ:ಅಸ್ತಿತ್ವ ಕಳೆದುಕೊಳ್ಳುತ್ತಿದೆ ಅಗಸಿಹೊಂಡ ?

ಕುಂದಗೋಳ : ಗ್ರಾಮೀಣ ಕೆರೆಗಳಿಗೆ ಆಜಾದಿ ಕಾ ಅಮೃತ ಮಹೋತ್ಸವ ಯೋಜನೆಯ ಒಲಿದು ಕೆರೆಗಳ ಅಭಿವೃದ್ಧಿ ಕಾರ್ಯ ನಡೆದಿದೆ. ಆದರೆ, ಇಡೀ ಕುಂದಗೋಳ ತಾಲೂಕಿನ ಐತಿಹಾಸಿಕ ಕೆರೆ ಅಗಸಿಹೊಂಡ ಮಾತ್ರ ದಿನೇ ದಿನೇ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ.

ಕುಂದಗೋಳ ಪಟ್ಟಣದಲ್ಲಿ ಕೆರೆಯಂಗಳದ ಮೂಲಕ ನೀರು ಪಡೆಯುವ ಈ ಅಗಸಿಹೊಂಡ, ಕಳೆದ ಹಲವಾರು ವರ್ಷಗಳಿಂದ ಅವ್ಯವಸ್ಥೆ ಸುಳಿಗೆ ಸಿಲುಕಿದ್ದು ಕರೆ ಸುತ್ತ ನಿರ್ವಹಣೆ ಇಲ್ಲದೆ ಎಲ್ಲೆಂದರಲ್ಲಿ ಕಸ ಬೆಳೆದರೆ, ಕೆರೆ ಈಗ ಪೂಜಾ ಸಾಮಗ್ರಿ ಪ್ಲಾಸ್ಟಿಕ್, ಹಳೆ ಫೋಟೋ, ನಿಂಬೆ, ಟೆಂಗಿನಕಾಯಿಯಂತಹ ಪೂಜೆಯ ತ್ಯಾಜ್ಯ ಎಸೆಯುವ ಸ್ಥಳವಾಗಿದೆ.

ಕೆರೆಯ ಸುತ್ತದ ಕಾಂಪೌಡ್ ಗೋಡೆ ಒಂದರ ಹಿಂದೆ ಒಂದು ಬಿದ್ದು ಹೋಗುತ್ತಿವೆ. ಒಂದು ಕಡೆಯ ಕಾಂಪೌಡ್ ಸರಿ ಮಾಡೋ ಹೊತ್ತಿಗೆ ಮತ್ತೊಂದು ಕಡೆಗೆ ಕಾಂಪೌಡ್ ಬಿದ್ದು ಹೋಗುತ್ತದೆ. ಹೀಗಾಗಿ ಪಟ್ಟಣ ಪಂಚಾಯಿತಿ ಅನುದಾನ ಕೊರತೆಯಿಂದ ಸಂಪೂರ್ಣ ಕೆರೆ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ.

ಐವತ್ತು ಅಡಿಗೂ ಅಧಿಕ ಆಳದ ಅಗಸಿಹೊಂಡ ಸಂಪೂರ್ಣ ಭರ್ತಿಯಾದ್ರೆ ಸಂಭ್ರಮದ ಜಲ ರಥೋತ್ಸವ ಇಲ್ಲಿ ನಡೆಯುತ್ತದೆ. ಆದರೆ, ನೀರಿಲ್ಲದ ಕಾರಣ ಈಗ ಅದು ಇಲ್ಲದಂತಾಗಿದ್ದು ಕೆರೆಗೆ ನೀರು ಬರುವ ಬೆಟದೂರ ದಾರಿ ಕಾಲುವೆ ಅಭಿವೃದ್ಧಿ ಅವಶ್ಯಕತೆ ಇದೆ.

ಅದರಂತೆ ಕೆರೆಯ ಸುತ್ತ ಭದ್ರತೆ ಹಾಗೂ ಕಾವಲುಗಾರರು ಇಲ್ಲದ್ದರಿಂದ ಈ ಕೆರೆಯಲ್ಲಿ ಮೀನು ಹಿಡಿಯಲು ಹೋಗಿ ವಯಸ್ಕರರು, ಆಟವಾಡಲು ಹೋಗಿ ಮಕ್ಕಳು ಸಾವನ್ನಪ್ಪಿದ್ದು ಈ ಕಹಿ ಘಟನೆ ಕೆರೆಗೆ ಕಳಂಕ ತಂದಿವೆ.

ಒಟ್ಟಾರೆ ಪುರಾತನ ಕಾಲದ ಕೆರೆಗೆ ಈಗಲೂ ಅಭಿವೃದ್ಧಿ ಕಾಯಕಲ್ಪ ಸಿಕ್ಕರೆ ಹಳೆ ವೈಭವ ಮರುಕಳಿಸಲಿದೆ.

-ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ

Edited By : Shivu K
Kshetra Samachara

Kshetra Samachara

08/08/2022 02:29 pm

Cinque Terre

29.71 K

Cinque Terre

0

ಸಂಬಂಧಿತ ಸುದ್ದಿ