ನವಲಗುಂದ: ನವಲಗುಂದ ತಾಲ್ಲೂಕಿನ ಖನ್ನೂರ ಗ್ರಾಮದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅವಸ್ಥೆಗೆ ಪ್ರಮುಖ ಮಳೆ, ಸುರಿದ ಮಳೆಗೆ ಶಾಲೆಯ ಆವರಣ ಸಂಪೂರ್ಣ ಕೆಸರು ಗದ್ದೆಯಾಗಿದೆ. ಇದರಿಂದ ಶಾಲಾ ಮಕ್ಕಳ ಕ್ರೀಡಾ ಚಟುವಟಿಕೆಗೆ ಅಡತಡೆ ಉಂಟಾಗುತ್ತಿರೋದಂತೂ ಸುಳ್ಳಲ್ಲ.
ಹೊಲಗಳಿಗೆ ತೆರಳುವ ರಸ್ತೆ, ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳು ಸಂಪೂರ್ಣ ಕೆಸರು ಗಡ್ಡೆಯಂತಾಗಿರೋದು ಸಾಮಾನ್ಯ. ಆದರೆ ಈಗ ಶಾಲಾ ಆವರಣವು ಸಹ ಅದೇ ಪರಿಸ್ಥಿತಿಗೆ ತಲುಪಿರೋದು ಪಾಲಕರಲ್ಲೂ ಆತಂಕ ಹೆಚ್ಚಿಸಿದೆ.
ಆವರಣದಲ್ಲಿ ಸಂಚರಿಸೋಕು ಭಯ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಕ್ಕಳ ಕ್ರೀಡಾ ಚಟುವಟಿಕೆಗಂತೂ ಅವಕಾಶವೆ ಇಲ್ಲದ ದುಸ್ಥಿತಿಯಲ್ಲಿ ವಿದ್ಯಾರ್ಥಿಗಳು ಇದ್ದಾರೆ ಎನ್ನುವ ಆರೋಪ ಸಹ ಇದೆ. ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿದಿನಗಳು ಎಚ್ಚೆತ್ತುಕೊಳ್ಳಬೇಕಿದೆ.
ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ
Kshetra Samachara
07/08/2022 06:57 pm