ನವಲಗುಂದ: ನವಲಗುಂದ ಭಾಗದಲ್ಲಿ ಸುರಿಯುತ್ತಿರುವ ಮಳೆಗೆ ಹಲವು ಕಿರು ಸೇತುವೆಗಳು ಮುಳುಗಡೆಯಾಗಿವೆ. ಅದೇ ರೀತಿ ಇಂದು ಸುರಿದ ಮಳೆಗೆ ಬೆಣ್ಣೆ ಹಳ್ಳದ ನೀರಿನ ಹರಿವು ಹೆಚ್ಚಾಗಿದ್ದು, ತಾಲ್ಲೂಕಿನ ಯಮನೂರ ಹಾಗೂ ಪಡೆಸೂರ ಮಧ್ಯ ಇರುವ ಕಿರು ಸೇತುವೆ ಸಂಪೂರ್ಣ ಜಲಾವೃತಗೊಂಡಿದೆ.
ಶುಕ್ರವಾರ ಬೆಳಿಗ್ಗೆಯಿಂದ ನೀರಿನ ಹರಿವು ಹೆಚ್ಚಾಗಿದೆ. ಇದರಿಂದ ಗ್ರಾಮಸ್ಥರು ಹಳ್ಳ ಡಾಟಲಾಗದೆ ಕಂಗಾಲಾಗಿದ್ದರು. ಶಾಲೆಯಿಂದ ತೆರಳಿದ ವಿದ್ಯಾರ್ಥಿಗಳು ಸೇರಿದಂತೆ ದ್ವಿಚಕ್ರ ವಾಹನ, ಗ್ರಾಮಸ್ಥರು ಟ್ರ್ಯಾಕ್ಟರ್ ಮೂಲಕ ಒಂದು ಕಡೆಯಿಂದ ಇನ್ನೊಂದು ಕಡೆಗೆ ಡಾಟಲು ಮುಂದಾಗಿದ್ದರು. ಏನಾದರೂ ಅವಘಡ ಸಂಭವಿಸಿದ್ದಲ್ಲಿ ಹೊಣೆ ಯಾರು ಎಂಬ ಆತಂಕ ಸಾರ್ವಜನಿಕರಲ್ಲಿ ಮನೆ ಮಾಡಿದೆ.
ಪ್ರತಿ ವರ್ಷವೂ ಇಂತಹದ್ದೇ ದುಸ್ಥಿತಿಯಲ್ಲಿ ಈ ಭಾಗದ ಜನರು ಜೀವನ ನಡೆಸುತ್ತಿರುವುದು ದುರಂತವೇ ಸರಿ ಎನ್ನುವಂತಾಗಿದೆ.
Kshetra Samachara
05/08/2022 09:29 pm