ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಪತ್ರಕರ್ತ ಮಂಜುನಾಥ ಶಿವಕ್ಕನವರಿಗೆ ಡಾಕ್ಟರೇಟ್ ಪದವಿ ಪ್ರದಾನ

ಕುಂದಗೋಳ : ತಾಲೂಕಿನ ಕಾರ್ಯನಿರತ ಪತ್ರಕರ್ತರ ಸಂಘದ ಅದ್ಯಕ್ಷ, ಪತ್ರಕರ್ತ ಮಂಜುನಾಥ ಶಿವಕ್ಕನವರ ಅವರಿಗೆ ಏಷ್ಯಾ ವೇದಿಕ್ ಕಲ್ಚರ್ ಯುನಿವರ್ಸಿಟಿ ಇಂಟರ್ ನ್ಯಾಶನಲ್ ಅಕ್ರಾಡೇಸಿಯನ್ ,ಅರ್ಗಾನೈಜ್ (ಯುಎಸ್ಎ) ಗೌರವ ಡಾಕ್ಟರೇಟ್‌ ಪದವಿ ನೀಡಿ ಗೌರವಿಸಿದೆ.

ತಮಿಳುನಾಡಿನ ವೇದಿಕ್ ಕಲ್ಚರ್ ರಿಸರ್ಚ್ ಯುನಿವರ್ಸಿಟಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಮಂಜುನಾಥ ಅವರಿಗೆ ಡಾಕ್ಟರೇಟ್ ಅವಾರ್ಡ್ ನೀಡಿ ಗೌರವಿಸಿತು.

ಗ್ರಾಮೀಣ ಪ್ರದೇಶದಲ್ಲಿ ಪತ್ರಿಕೆ ಹಂಚಿ ತಾಲೂಕ ಪತ್ರಿಕೆ ಏಜೆನ್ಸಿ ಪಡೆದು ಸುಮಾರು ಹದಿನೈದು ವರ್ಷ ಕಾಲ ನಂತರ ಬಿಡಿ ವರದಿಗಾರರಾಗಿ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸುತ್ತಾ ತಾಲೂಕ ವರದಿಗಾರರಾಗಿ ಕೆಲಸ ನಿರ್ವಹಿಸುವುದರ ಜೊತೆ ನವದೆಹಲಿ ಕೃಷಿಕ ಸಮಾಜ ರೈತ ಸಂಘಟನೆಯ ರಾಜ್ಯ ಮಾಧ್ಯಮ ಸಂಯೋಜಕರಾಗಿ ರೈತರ ಸಮಸ್ಯೆ ಕುರಿತು ಬೆಳಕು ಚೆಲ್ಲುವ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಕುಂದಗೋಳ ತಾಲೂಕು ಬೆನಕನಹಳ್ಳಿ ಗ್ರಾಮದ ಪುಟ್ಟ ಹಳ್ಳಿಯಿಂದ ಪಟ್ಟಣಕ್ಕೆ ಬಂದು ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಇವರ ಸಾಧನೆ ಗುರುತಿಸಿ ಗೌರವ ಡಾಕ್ಟರೇಟನ್ನು ಶನಿವಾರ ಜುಲೈ 30ರಂದು ತಮಿಳುನಾಡಿನ ಹೊಸೂರು ಕ್ಲಾರೆಸ್ಟಾ ಹೋಟೆಲ್‌ನಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮಂಜುನಾಥ ಶಿವಕ್ಕನವರ ಅವರಿಗೆ ಡಾಕ್ಟರೇಟ್ ಪದವಿ ಪ್ರದಾನ‌ ಮಾಡಲಾಗಿದೆ.

Edited By : PublicNext Desk
Kshetra Samachara

Kshetra Samachara

04/08/2022 04:39 pm

Cinque Terre

7.97 K

Cinque Terre

0

ಸಂಬಂಧಿತ ಸುದ್ದಿ