ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ರಸ್ತೆ ಬದಿ ಕಸ ತ್ಯಾಜ್ಯ ಕ್ಲೀನ್ ! ವಾಹನ ಸವಾರರು, ರೈತರು ಖುಷ್

ಕುಂದಗೋಳ : ಪಟ್ಟಣದ ಘನ ತ್ಯಾಜ್ಯ ವಿಲೇವಾರಿ ಘಟಕದ ಬಳಿ ರಸ್ತೆ ಬದಿ ಸುರಿದಿದ್ದ ಕಸಕ್ಕೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಸ್ವಚ್ಚತೆ ಭಾಗ್ಯ ನೀಡಿ ಸಾರ್ವಜನಿಕರು ಹಾಗೂ ರೈತರಿಗೆ ಅನುಕೂಲ ಮಾಡಿದ್ದಾರೆ.

ಹೌದು ! ಕಳೆದ ಹಲವಾರು ದಿನಗಳ ಅಮರಶಿವ ಪ್ಲಾಟ್ ಬಳಿ ಇರುವ ಪಟ್ಟಣ ಪಂಚಾಯಿತಿ ತ್ಯಾಜ್ಯ ವಿಲೇವಾರಿ ಘಟಕದ ಪಕ್ಕ ರಸ್ತೆ ಬದಿ ಕಸ ಸುರಿಯಲಾಗಿತ್ತು. ಈ ಪರಿಣಾಮ ರಸ್ತೆ ಪಕ್ಕ ವಾಹನ ಓಡಾಟಕ್ಕೆ ದುರ್ವಾಸನೆ ಜೊತೆ ಪ್ಲಾಸ್ಟಿಕ್ ತ್ಯಾಜ್ಯ ಗಾಳಿಗೆ ಹಾರಿ ರೈತರ ಹೊಲ ಸೇರುತ್ತಿತ್ತು ಇನ್ನೂ ಶ್ವಾನಗಳ ಹಾವಳಿಯೂ ಹೆಚ್ಚಾಗಿತ್ತು. ಈ ನಾಯಿಗಳು ಕೆಲ ರೈತರಿಗೆ ಕಚ್ಚಿದ್ದವು.

ಈ ಬಗ್ಗೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ರೈತರ ಅಭಿಪ್ರಾಯದ ಸಮೇತ ವರದಿ ಪ್ರಕಟ ಮಾಡಿತ್ತು.

ಸದ್ಯ ಪಟ್ಟಣ ಪಂಚಾಯಿತಿ ಪೌರ ಕಾರ್ಮಿಕರು ರಸ್ತೆ ಬದಿ ಕಸ ತೆಗೆದು ರೈತಾಪಿ ಕಾಯಕ ಹಾಗೂ ಸಾರ್ವಜನಿಕರಿಗೆ ಉತ್ತಮ ವಾತಾವರಣ ಒದಗಿಸಿದ್ದಾರೆ.

ಒಟ್ಟಾರೆ ರೈತಾಪಿ ಜನರಿಗೆ ಜಾನುವಾರುಗಳಿಗೆ ವಾಹನ ಸವಾರರಿಗೆ ಅಪಾಯದ ದುರ್ವಾಸನೆ ಕೃಷಿ ಚಟುವಟಿಕೆ ಅಡೆತಡೆ ದೂರವಾಗಿವೆ.

ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್

Edited By : Shivu K
Kshetra Samachara

Kshetra Samachara

02/08/2022 10:54 pm

Cinque Terre

40.71 K

Cinque Terre

0

ಸಂಬಂಧಿತ ಸುದ್ದಿ