ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪಬ್ಲಿಕ್ ನೆಕ್ಸ್ಟ್ ವರದಿಗೆ ಶೆಟ್ಟರ್ ಸ್ಪಂದನೆ; ಪಬ್ಲಿಕ್ ಸಮಸ್ಯೆ ಪರಿಹಾರಕ್ಕೆ ಭರವಸೆ...!

ಹುಬ್ಬಳ್ಳಿ: ವಾಣಿಜ್ಯನಗರಿಯ ಆಯಕಟ್ಟಿನ ಪ್ರದೇಶದಲ್ಲಿ ಒಂದಾಗಿರುವ ನೃಪತುಂಗ ನಗರದ ಸಮಸ್ಯೆಗಳ ಕುರಿತು ನಿಮ್ಮ ಪಬ್ಲಿಕ್ ನೆಕ್ಸ್ಟ್ ಸಾಕಷ್ಟು ಬೆಳಕು ಚೆಲ್ಲಿತ್ತು. ಮೊನ್ನೆಯಷ್ಟೇ ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಿ ತಾತ್ಕಾಲಿಕ ಮುಕ್ತಿ ಕೂಡ ಸಿಕ್ಕಿತ್ತು. ಇದರ ಮಧ್ಯ ಈಗ ಶಾಶ್ವತ ಪರಿಹಾರದ ಹಿನ್ನೆಲೆಯಲ್ಲಿ ಜನರ ಸಮಸ್ಯೆಗೆ ಹಾಗೂ ಪಬ್ಲಿಕ್ ನೆಕ್ಸ್ಟ್ ವರದಿಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸ್ಪಂದನೆ ನೀಡಿದ್ದಾರೆ.

ಮಳೆ ಬಂದರೆ ಸಾಕು ದೊಡ್ಡ ಕೆರೆಯಂತಾಗುತ್ತಿದ್ದ ನೃಪತುಂಗನಗರದ ಕುರಿತು ಸಾಕಷ್ಟು ಬಾರಿ ವರದಿ ಮಾಡುವ ಮೂಲಕ ಸ್ಥಳೀಯ ಜನಪ್ರತಿನಿಧಿಗಳ ಗಮನವನ್ನು ಸೆಳೆದಿತ್ತು. ಈ ನಿಟ್ಟಿನಲ್ಲಿ ಜಗದೀಶ ಶೆಟ್ಟರ್ ಲೋಕೊಪಯೋಗಿ ಇಲಾಖೆಯಿಂದ ಕಾಮಗಾರಿ ಕೈಗೆತ್ತಕೊಳ್ಳಲು ಬಿಡುಗಡೆ ಗೊಳಿಸಿರುವ ಮೊತ್ತವನ್ನು ಹಾಗೂ ಪೂರ್ಣ ಕಾಮಗಾರಿಗೆ ಸರ್ಕಾರದಿಂದ ಅನುದಾನ ಒದಗಿಸುವ ಭರವಸೆ ನೀಡಿದರು‌.

ಇನ್ನೂ ಅನುದಾನ ಕಾಲೋನಿಯಲ್ಲಿರುವ ಮುಖ್ಯ ರಸ್ತೆಯ ಡಾಂಬರೀಕರಣ ಮಾಡಿಸಲು ಸಾಲದೇ ಇರುವುದರಿಂದ ಹೆಚ್ಚಿನ ಮೊತ್ತವನ್ನು ಬಿಡುಗಡೆ ಮಾಡಬೇಕು ಮತ್ತು ಸುಮಾರು ಒಂದು ವರ್ಷಗಳಿಂದ ಗಟಾರ್ ಕಾಮಗಾರಿ ಅರ್ಧಕ್ಕೆ ನಿಂತುಹೋಗಿ ತುಂಬ ಸಮಸ್ಯೆಯನ್ನು ಎದುರಿಸುತ್ತಿರುವ ಕಾರಣ ಶಾಸಕರ ಗಮನಕ್ಕೆ ತರಲು ಪ್ರಮುಖ ನಿವಾಸಿಗಳು ಶೆಟ್ಟರ್ ಅವರನ್ನು ಭೇಟಿಯಾಗಿದ್ದು, ಕಾಲೋನಿಯ ರಸ್ತೆಗಳಿಗೆ ಅವಶ್ಯವಿರುವ ಎಲ್ಲ ಹಣವನ್ನೂ ಬಿಡುಗಡೆಗೊಳಿಸಿ ಸದ್ಯದಲ್ಲಿ ಟೆಂಡರ್ ಪ್ರಕ್ರಿಯೆಯನ್ನು ಪ್ರಾರಂಭಗೊಳಿಸಿ ಬರುವ ಡಿಸೆಂಬರ್ ಒಳಗೆ ಕಾಮಗಾರಿಯನ್ನು ಪ್ರಾರಂಭಿಸುವ ಭರವಸೆ ನೀಡಿದರು.

Edited By : Shivu K
Kshetra Samachara

Kshetra Samachara

02/08/2022 04:58 pm

Cinque Terre

66.28 K

Cinque Terre

12

ಸಂಬಂಧಿತ ಸುದ್ದಿ