ಅಣ್ಣಿಗೇರಿ: ಪಟ್ಟಣದಿಂದ ಮಜ್ಜಿಗುಡ್ಡ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಡಾಂಬರೀಕರಣ ಕಿತ್ತು ಹೋಗಿದ್ದು ತಗ್ಗು ಗುಂಡಿಗಳು ಬಿದ್ದು ಮತ್ತು ಹಳ್ಳದಲ್ಲಿ ಇರುವ ಕಬ್ಬಿಣ ರಾಡ್‌ಗಳು ಮೇಲೆ ಎದ್ದಿರುವುದರಿಂದ ಈ ರಸ್ತೆಯ ಮೇಲೆ ಸಂಚರಿಸುವ ವಾಹನ ಸವಾರರು ಪ್ರತಿನಿತ್ಯ ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಸಂಚರಿಸುತ್ತಿದ್ದಾರೆ.
ಮಜ್ಜಿಗುಡ್ಡ ಗ್ರಾಮದಿಂದ ಕೆಲಸ ಅರಸಿ ದಿನನಿತ್ಯ ಅಣ್ಣಿಗೇರಿ ಪಟ್ಟಣಕ್ಕೆ ನೂರಾರು ಜನ ಆಗಮಿಸುತ್ತಾರೆ. ಪಟ್ಟಣದಿಂದ ಮಜ್ಜಿಗುಡ್ಡ ಗ್ರಾಮಕ್ಕೆ ಕೇವಲ ಐದು ಕಿಲೋಮೀಟರ್ ರಸ್ತೆ ಇರುತ್ತದೆ. ಆದರೆ ಇದೇ 5 ಕಿಲೋಮೀಟರ್ ಸಂಚರಿಸಲು ಬರೋಬ್ಬರಿ ಒಂದು ಗಂಟೆ ಹತ್ತಿರ ಸಮಯ ತೆಗೆದುಕೊಳ್ಳುತ್ತದೆ. ಪಟ್ಟಣಕ್ಕೆ ದಿನಂಪ್ರತಿ ಶಾಲೆಗೆ ವಿದ್ಯಾರ್ಥಿಗಳು ತೆರಳುತ್ತಾರೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.ಇನ್ನೂ ಇದೇ ಮಾರ್ಗವಾಗಿ ಅಂತೂರು ಬೆಂತೂರು ಗ್ರಾಮಸ್ಥರು ಸಹ ಸಂಚಾರ ಮಾಡುತ್ತಾರೆ.
ಇನ್ನು ಗ್ರಾಮದ ಆರಾಧ್ಯ ದೈವ ರಾಜ್ಯಾದ್ಯಂತ ಪ್ರಸಿದ್ಧವಾಗಿರುವ ಶ್ರೀ ಬಸವೇಶ್ವರ ದೇವಸ್ಥಾನ ಇದೆ. ಇನ್ನೇನು ಕೆಲವೇ ದಿನಗಳಲ್ಲಿ ಶ್ರಾವಣ ಮಾಸ ಪ್ರಾರಂಭವಾದರೆ ದೇವರ ದರ್ಶನಕ್ಕೆ ಪ್ರತಿನಿತ್ಯ ನೂರಾರು ಭಕ್ತರು ರಾಜ್ಯದ ನಾನಾ ಜಿಲ್ಲೆಗಳಿಂದ ಭಕ್ತರು ಬರುತ್ತಾರೆ. ಆದಕಾರಣ ಸಂಬಂಧಪಟ್ಟ ಅಧಿಕಾರಿಗಳು ಈ ಭಾಗದ ಶಾಸಕ ಮತ್ತು ಸಚಿವರಾದ ಶಂಕರ್ ಪಾಟೀಲ್ ಮುನೇನಕೊಪ್ಪ ಅವರಿಗೆ ಗ್ರಾಮದ ಸಾರ್ವಜನಿಕರು ರಸ್ತೆಯನ್ನು ಸರಿ ಮಾಡಿಸಿ ಕೊಡಿ ಎಂದು ಮನವಿ ಮಾಡುತ್ತಿದ್ದಾರೆ. ಈ ವಿಷಯವಾಗಿ ಹಿಂದೆಯೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ರಸ್ತೆ ನಿರ್ಮಾಣ ಆಗಿಲ್ಲ ಎಂದು ಗ್ರಾಮಸ್ಥರು ತಿಳಿಸಿದರು.
ನಂದೀಶ ಪಬ್ಲಿಕ್ ನೆಕ್ಸ್ಟ್ ಅಣ್ಣಿಗೇರಿ
Kshetra Samachara
22/07/2022 11:31 am