ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಗುಡಗೇರಿಯಲ್ಲಿ 56 ಲಕ್ಷ ರೂ. ವೆಚ್ಚದ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಪೂಜೆ

ಕುಂದಗೋಳ : ಗುಡಗೇರಿ ಗ್ರಾಮದ ಎಸ್.ಸಿ ಕಾಲೊನಿಯಲ್ಲಿ 56 ಲಕ್ಷ ರೂ.ವೆಚ್ಚದ ಸಿ.ಸಿ ರಸ್ತೆಯ ಭೂಮಿಯ ಪೂಜೆಯನ್ನು ಕುಂದಗೋಳ ಮತಕ್ಷೇತ್ರದ ಶಾಸಕರಾದ ಕುಸುಮಾವತಿ ಚ ಶಿವಳ್ಳಿ ಅವರು ನೆರವೇರಿಸಿದರು.

ಬಳಿಕ ಮಾತನಾಡಿದ ಅವರು ನನ್ನ ಚುನಾವಣಾ ಸಂದರ್ಭದಲ್ಲಿ ನಿಮಗೆ ಮಾತು ಕೊಟ್ಟಂತೆ, ಈ ರಸ್ತೆಯ ಕಾಮಗಾರಿಯ ಭೂಮಿ ಪೂಜೆ ಕೆಲಸ ಮಾಡಿದ್ದೇನೆ. ಇನ್ನೂ ಸರ್ಕಾರದಿಂದ ಅನೇಕ ಅಭಿವೃದ್ಧಿ ಕೆಲಸವನ್ನು ಮಾಡಲಿದ್ದೇನೆ ಎಂದು ಭರವಸೆ ನೀಡುತ್ತೇನೆ. ಅಲ್ಲದೆ ಬಡವರ ಪರವಾಗಿ ನನ್ನ ಕಾರ್ಯ ಸದಾ ಇರುತ್ತದೆ ಎಂದು ಅವರು ಹೇಳಿದರು.

ಗ್ರಾಮದಲ್ಲಿ ನೀರಿನ ಸಮಸ್ಯೆ ತಲೆದೋರಿದ್ದು, ಅದನ್ನು ಸಹ ಆದಷ್ಟು ಬೇಗ ಬಗೆಹರಿಸಲು ಜಲಜೀವನ ಮಷಿನ್ ಯೋಜನೆ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು.ಒಟ್ಟು ನನ್ನ ಮತ ಕ್ಷೇತ್ರದಲ್ಲಿ 25 ಕೋಟಿ ರೂ. ವೆಚ್ಚದ ಕಾಮಗಾರಿಗಳು ಇದ್ದು, ಆದಷ್ಟು ಬೇಗ ಎಲ್ಲಾ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮುಖಂಡರಾದ ಮಾಜಿ ಜಿಪಂ ಸದಸ್ಯ ವೆಂಕನಗೌಡ್ರ ಹಿರೇಗೌಡ್ರ, ದಯಾನಂದ ಕುಂದೂರ, ವಿಜಯಕುಮಾರ ಹಾಲಿ,ವಿ.ಆರ್.ರಂಗನಗೌಡ್ರ, ರವಿರಾಜ್ ಬಸ್ತಿ,ರಾಜೇಂದ್ರ ಪಾಟೀಲ,ಮಂಜುನಾಥ್ ಗದಗಿನಮಠ, ವಿನಾಯಕ ಮನ್ನಾಳಕೇರಿ, ಹನಮಂತ ಬೆಂತೂರ, ದಿನೇಶ ಮುದ್ದಪ್ಪನವರ, ದರ್ಶನ ಸೇರಿದಂತೆ ಗ್ರಾಪಂ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

21/07/2022 08:48 am

Cinque Terre

6.44 K

Cinque Terre

0

ಸಂಬಂಧಿತ ಸುದ್ದಿ