ಕಲಘಟಗಿ: ಪಟ್ಟಣದ ಬಸವೇಶ್ವರ ನಗರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಅವ್ಯವಸ್ಥೆ ನೋಡಿದ್ರೆ ಇಲ್ಲಿ ಮಕ್ಕಳು ಪಾಠ ಹೇಗೆ ಕಲಿಯುವುದೋ ತಿಳಿಯದಂತಾಗಿದೆ. ಈ ಶಾಲೆಯ ಆವರಣದಲ್ಲಿ ಅಂಗನವಾಡಿ ಕೇಂದ್ರ ಕೂಡ ಇದ್ದು ಶಾಲೆಯ ಆವರಣವನ್ನು ಇಲ್ಲಿ ಕಲಿಯುವ ಮಕ್ಕಳೇ ಸ್ವಚ್ಛತೆ ಮಾಡಬೇಕಾದ ಪರಿಸ್ಥಿತಿ ಇದೆ.
ಶಾಲೆಯ ಸುತ್ತಲೂ ಕಸದ ರಾಶಿ ಇರುವ ಕಾರಣ ಹಾವು ಚೇಳುಗಳ ಕಾಟ ಬೇರೆ. ಇನ್ನು ಶಾಲೆಯ ಜಾಗವನ್ನು ಸುತ್ತಮುತ್ತಲಿನ ಮನೆಯವರು ಅತಿಕ್ರಮಣ ಮಾಡಿದ್ದು, ಎಮ್ಮೆ ಕರುಗಳನ್ನು ಇಲ್ಲಿ ಮೇಯಲು ಬಿಡುತ್ತಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಶಾಸಕರು ಇಲ್ಲಿಯ ಸಮಸ್ಯೆಗಳನ್ನು ಬಗೆಹರಿಸಿ ಶಾಲೆಯ ಸುತ್ತಲೂ ಕಾಂಪೌಂಡ್ ನಿರ್ಮಿಸಿ ಮಕ್ಕಳ ಕಲಿಕೆಗೆ ಅನೂಕೂಲ ಮಾಡಿಕೋಡಬೇಕಾಗಿದೆ.
-ಉದಯ ಗೌಡರ, ಪಬ್ಲಿಕ್ ನೆಕ್ಸ್ಟ್, ಕಲಘಟಗಿ
Kshetra Samachara
20/07/2022 07:26 pm