ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ನೃಪತುಂಗನಗರ ಸಮಸ್ಯೆಗೆ ಬಿತ್ತು ಬ್ರೇಕ್: ಇದು ಪಬ್ಲಿಕ್ ನೆಕ್ಸ್ಟ್ ಬಿಗ್ ಇಂಪ್ಯಾಕ್ಟ್

ಹುಬ್ಬಳ್ಳಿ: ಅದು ನಿಜಕ್ಕೂ ಹುಬ್ಬಳ್ಳಿ ಮಾತ್ರವಲ್ಲದೇ ಸುತ್ತಮುತ್ತಲಿನ ಜಿಲ್ಲೆಯ ಜನರ ಪ್ರವಾಸೀ ತಾಣ. ಆದರೆ ಆ ತಾಣದ ಹೆಸರಿನಲ್ಲಿರುವ ನಗರದ ವ್ಯವಸ್ಥೆ ನೋಡಿದ್ರೆ ನಿಜಕ್ಕೂ ಜನರಲ್ಲಿ ಬೇಸರದ ಭಾವನೆ ಮೂಡುತ್ತಿತ್ತು. ಇದೀಗ ಪಬ್ಲಿಕ್ ನೆಕ್ಸ್ಟ್ ವಿಸ್ತೃತ ವರದಿ ಬಿತ್ತರಿಸಿದ ಬೆನ್ನಲ್ಲೇ ಜನಪ್ರತಿನಿಧಿಗಳು ಹಾಗೂ ಸ್ಥಳೀಯ ಆಡಳಿತ ಮಂಡಳಿ ಎಚ್ಚೆತ್ತುಕೊಂಡು ತುರ್ತು ಕಾಮಗಾರಿ ಕೈಗೆತ್ತಿಕೊಂಡಿದ್ದಾರೆ. ಪಬ್ಲಿಕ್ ನೆಕ್ಸ್ಟ್ ವರದಿಯ ಬಿಗ್ ಇಂಪ್ಯಾಕ್ಟ್ ಇದಾಗಿದೆ.

ಹುಬ್ಬಳ್ಳಿಯಲ್ಲಿ ನೃಪತುಂಗ ಬೆಟ್ಟ ಅಂದರೆ ನಿಜಕ್ಕೂ ಇಲ್ಲಿನ ಜನರಿಗೆ ಮಾತ್ರವಲ್ಲದೆ ಧಾರವಾಡ, ಗದಗ ಹಾಗೂ ಹಾವೇರಿ ಜಿಲ್ಲೆಯ ಪ್ರವಾಸಿಗರಿಗೆ ಸ್ವರ್ಗವೇ ಧರೆಗೆ ಇಳಿದಂತೆ. ಆದರೆ ಹುಬ್ಬಳ್ಳಿಯ ನೃಪತುಂಗನಗರದ ವ್ಯವಸ್ಥೆ ನೋಡಿದ್ರೆ ನರಕವೇ ನೆಲೆಸಿದಂತೆ. ಹುಬ್ಬಳ್ಳಿಯ ನೃಪತುಂಗ ಬೆಟ್ಟದ ಹಿಂಭಾಗದಲ್ಲಿರುವ ಉಣಕಲ್ ಗೆ ಹೊಂದಿಕೊಂಡಿರುವ ನೃಪತುಂಗ ನಗರದ ವ್ಯವಸ್ಥೆ ನೋಡಿದ್ರೆ ನಿಜಕ್ಕೂ ಎಂತವರಿಗೂ ಬೇಸರ ಮೂಡುವಂತಿತ್ತು. ಈ ಕುರಿತು ಪಬ್ಲಿಕ್ ನೆಕ್ಸ್ಟ್ ವರದಿ ಬಿತ್ತರಿಸಿದ ಬೆನ್ನಲ್ಲೇ ಸ್ಥಳಕ್ಕೆ ಆಗಮಿಸಿದ ಜನಪ್ರತಿನಿಧಿಗಳು ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ಕಾಮಗಾರಿ ಕೈಗೆತ್ತಿಕೊಂಡಿದ್ದಾರೆ.

ಈಗಾಗಲೇ ಒಂದು ವಾರದಿಂದ ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಿದ್ದು, ಕೆಸರು ಗದ್ದೆಯಂತಾಗಿರುವ ರಸ್ತೆಗೆ ಕಾಮಗಾರಿ ಭಾಗ್ಯ ದೊರೆತಿದ್ದು, ಜನರು ಪಬ್ಲಿಕ್ ನೆಕ್ಸ್ಟ್ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

19/07/2022 08:16 pm

Cinque Terre

48.23 K

Cinque Terre

2

ಸಂಬಂಧಿತ ಸುದ್ದಿ