ಕುಂದಗೋಳ: ತಾಲೂಕಿನ ಗುಡಗೇರಿ ರೈಲ್ವೆ ಟ್ರ್ಯಾಕ್ ರಸ್ತೆಯ ತಗ್ಗು ಗುಂಡಿಗಳನ್ನು ಮುಚ್ಚುವ ಕಾರ್ಯವನ್ನು ನಮ್ಮ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಆರಂಭ ಮಾಡ್ಯಾರ ನೋಡ್ರಿ.
ಇತ್ತೀಚೆಗಷ್ಟೇ ನಿಮ್ಮ ಪಬ್ಲಿಕ್ ನೆಕ್ಸ್ಟ್ ಗುಡಗೇರಿ ರೈಲ್ವೆ ಗೇಟ್ ರಸ್ತೆ ಮಂಡಿಗನಾಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಬಗ್ಗೆ ವರದಿ ಮಾಡಿತ್ತು. ಇದಲ್ಲದೆ ಇದೇ ಗುಡಗೇರಿ ರೈಲ್ವೆ ಟ್ರ್ಯಾಕ್ ರಸ್ತೆಯಲ್ಲಿ ನಮ್ಮ ಜನಪ್ರತಿನಿಧಿ ಶಾಸಕರ ಕಾರು ತಗ್ಗು ಗುಂಡಿ ತಪ್ಪಸುವ ದೃಶ್ಯದ ಸಮೇತ ವರದಿ ಮಾಡಿ ಜನ, ಜನಪ್ರತಿನಿಧಿಗಳು ಓಡಾಟದ ರಸ್ತೆ ಅಭಿವೃದ್ಧಿ ಯಾವಾಗ? ಎಂದು ಪ್ರಶ್ನೇ ಮಾಡಿತ್ತು.
ಇದೀಗ ಈ ವರದಿ ಗಮನಿಸಿದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ರಸ್ತೆ ತಗ್ಗಿಗೆ ತಾತ್ಕಾಲಿಕವಾಗಿ ಕಲ್ಲು ಹಾಗೂ ಮಣ್ಣು ಸುರಿದು ದುರಸ್ತಿ ಕಾರ್ಯ ನಡೆಸಿದ್ದಾರೆ. ಮಳೆ ಕಡಿಮೆಯಾದ ಬಳಿಕ ಪರ್ಯಾಯ ಡಾಂಬರ್ ಕಾಮಗಾರಿ ಮಾಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್ : ಶ್ರೀಧರ ಪೂಜಾರ
Kshetra Samachara
19/07/2022 02:28 pm