ಹುಬ್ಬಳ್ಳಿ: ನೂರಾರು ಕೋಟಿಯ ಮಹತ್ವದ ಯೋಜನೆಯ ಅಸಲಿ ಬಣ್ಣವನ್ನು ಮಳೆಯೊಂದು ಬಯಲು ಮಾಡಿದ್ದು,ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಹಾಗಿದ್ದರೇ ಯಾವುದು ಆ ಯೋಜನೆ ಅಂತೀರಾ ಇಲ್ಲಿದೆ ನೋಡಿ ಮಹತ್ವಪೂರ್ಣ ಯೋಜನೆಯ ಅಸಲಿಯತ್ತು.
ಹೌದು.. ಸತತ ಮಳೆಗೆಗೆ ಹುಬ್ಬಳಿಯ ರಸ್ತೆಗಳು ಕೆಸರು ಗದ್ದೆಯಾಗಿದ್ದು,ಸ್ಮಾರ್ಟ್ ಸಿಟಿ ಕಾಮಗಾರಿಯನ್ನು ಒಂದೇ ಮಳೆ ಬಟಾಬಯಲು ಮಾಡಿದೆ. ವಾಹನಗಳು ಅಷ್ಟೇ ಅಲ್ಲ ಜನ ಸಹ ಓಡಾಡಲು ಸಂಕಷ್ಟ ಎದುರಾಗಿದ್ದು,ಮಕ್ಕಳ, ವೃದ್ಧರು, ಗರ್ಭಿಣಿಯರು ಮನೆಬಿಟ್ಟು ಹೊರ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಕುರಿತು ಪಬ್ಲಿಕ್ ನೆಕ್ಸ್ಟ್ ರಿಯಾಲಿಟಿ ಚೆಕ್ ನಲ್ಲಿ ಸ್ಮಾರ್ಟ್ ರಸ್ತೆಗಳ ಅಸಲಿ ಬಂಡವಾಳ ಬಯಲಾಗಿದೆ.
ಹುಬ್ಬಳ್ಳಿ ನಗರದಲ್ಲಿ ವಿವಿಧ ಏರಿಯಾಗಳ ಮುಖ್ಯ ರಸ್ತೆಗಳು ಹದಗೆಟ್ಟು ಹಳ್ಳಹಿಡಿದ್ದು, ಜನರಲ್ಲಿ ಆಕ್ರೋಶ ಮಡುಗಟ್ಟಿದೆ. ಪಬ್ಲಿಕ್ ನೆಕ್ಸ್ಟ್ ಮಾಧ್ಯಮಕ್ಕೆ ಮಾಹಿತಿ ನೀಡಿರುವ ಜನ ಆಕ್ರೋಶ ಹೊರಹಾಕಿದ್ದಾರೆ.
ಒಟ್ಟಿನಲ್ಲಿ ಸ್ಮಾರ್ಟ್ ಸಿಟಿ ನಂಬಿಕೊಂಡಿದ್ದವರಿಗೆ ಈಗ ಅಸಮಾಧಾನ ಉಂಟಾಗಿದ್ದು, ಮಹತ್ವದ ಯೋಜನೆ ಬಂದರೂ ಮಾತ್ರ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳ ಸಮಸ್ಯೆ ಮಾತ್ರ ನಿವಾರಣೆ ಆಗುತ್ತಿಲ್ಲ.
Kshetra Samachara
18/07/2022 06:43 pm