ಅಳ್ನಾವರ: ಅಳ್ನಾವರ ತಾಲೂಕಿನ ಅರವಟಗಿ ಗ್ರಾಪಂ ವ್ಯಾಪ್ತಿಗೆ ಒಳಪಡುವ ಮಡಕಿಕೊಪ್ಪ ಎಂಬ ಗೌಳಿಗರ ಹಳ್ಳಿ, ಮಳೆಯ ಹೊಡೆತಕ್ಕೆ ಕೆಸರು ಗದ್ದೆಯಂತಾಗಿದೆ. ಮೂಲಭೂತ ಸೌಕರ್ಯಗಳಿಂದ ವಂಚಿತ ಈ ಹಳ್ಳಿಜನ ಈಗಲೂ ಆದಿವಾಸಿಗಳಂತೆ ಜೀವನ ನಡೆಸುತ್ತಿದ್ದಾರೆ.
ಇಲ್ಲಿ ಅಭಿವೃದ್ಧಿ ಅನ್ನೋದು ಮರೀಚಿಕೆಯಾಗಿಯೇ ಉಳಿದಿದೆ. ರಸ್ತೆ, ವಿದ್ಯುತ್ ಇಲ್ಲದೆ, ಕುಡಿಯಲು ನೀರಿನ ಪರದಾಟ, ಪ್ರತಿದಿನ ಕತ್ತಲಲ್ಲಿ ಕಳೆಯುವ ದಿನಗಳು, ಕಾಡುಪ್ರಾಣಿಗಳ ಹಾವಳಿಯಿಂದ ತತ್ತರಿಸಿದ ಬದುಕು! ಒಂದೇ, ಎರಡೇ... ಹೀಗೆ ಸಮಸ್ಯೆ- ಸಂಕಷ್ಟಗಳ ಸರಮಾಲೆಯೇ ಇದೆ.
ಸುಮಾರು 150ರಷ್ಟು ಜನಸಂಖ್ಯೆ ಹೊಂದಿರುವ ಈ ಹಳ್ಳಿಯಲ್ಲಿ ಇರುವ ಮನೆಗಳ ಸಂಖ್ಯೆ ಕೇವಲ 15. ನೂರೈವತ್ತು ವರ್ಷ ಇತಿಹಾಸ ಹೊಂದಿರುವ ಈ ಹಳ್ಳಿಯಲ್ಲಿ ಸರ್ಕಾರದಿಂದಾಗಲಿ, ರಾಜಕಾರಣಿಯಿಂದಾಗಲಿ ಇದುವರೆಗೂ ಯಾವುದೇ ಕೆಲಸವಾಗಿಲ್ಲ. ಮಕ್ಕಳ ಶಿಕ್ಷಣಕ್ಕಾಗಿ ಅಂಗನವಾಡಿಯಿಲ್ಲ ಇತ್ಯಾದಿ "ಇಲ್ಲ"ಗಳ ಸಾಲು. ಶಾಸಕರು, ಅಧಿಕಾರಿಗಳು, ಪಂಚಾಯಿತಿ ಮಂದಿ ಈ ಹಳ್ಳಿಗೆ ಒಮ್ಮೆ ಭೇಟಿ ನೀಡಿ, ಸಮಸ್ಯೆಯ ಆಳ ಅರಿತುಕೊಳ್ಳಿ.
ಮಹಾಂತೇಶ ಪಠಾಣಿ, ಪಬ್ಲಿಕ್ ನೆಕ್ಸ್ಟ್ ಅಳ್ನಾವರ
Kshetra Samachara
17/07/2022 03:16 pm