ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: "ನಾವು ಸಾಯುವ ಮುಂಚೆ ಒಳ್ಳೆಯ ರಸ್ತೆ ನಿರ್ಮಿಸಿ ಪುಣ್ಯ ಕಟ್ಟಿಕೊಳ್ಳಿ"

ಹುಬ್ಬಳ್ಳಿ: ಅದು ನಿಜಕ್ಕೂ ಸಾಕಷ್ಟು ಸಮಸ್ಯೆಗಳನ್ನು ಹೊತ್ತು ಕುಂಟುತ್ತಾ ಸಾಗುತ್ತಿರುವ ಗ್ರಾಮ. ಈ ಗ್ರಾಮದ ಜನರ ಸಮಸ್ಯೆ ನೋಡಿದರೇ ಎಂತವರಿಗೂ ಅಯ್ಯೋ ಪಾಪ ಅನಿಸುವುದು ಖಂಡಿತಾ. ಹಾಗಿದ್ದರೇ ಈ ಗ್ರಾಮದ ಸಮಸ್ಯೆ ಹಾಗೂ ಇಲ್ಲಿನ ಜನರ ಕಣ್ಣೀರಿನ ಕಥೆಯನ್ನು ಪಬ್ಲಿಕ್ ನೆಕ್ಸ್ಟ್ ಬಿಚ್ಚಿಡುತ್ತಿದೆ ನೋಡಿ...

ಹೀಗೆ ಎಲ್ಲೆಂದರಲ್ಲಿ ಕೆಸರು ಗದ್ದೆಯಾಗಿರುವ ರಸ್ತೆಗಳು. ನಡೆದಾಡಲು ಹರಸಾಹಸ ಮಾಡುತ್ತಿರುವ ಗ್ರಾಮಸ್ಥರು. ಹೌದು... ಇದೆಲ್ಲದ್ದಕ್ಕೂ ಸಾಕ್ಷಿಯಾಗಿದ್ದು ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ ಗ್ರಾಮ. ಈ ಗ್ರಾಮದ ಜನರ ಸಂಕಷ್ಟ ಕೇಳುವವರು ಯಾರು? ಜವಾಬ್ದಾರಿ ವಹಿಸಬೇಕಿದ್ದ ಜನಪ್ರತಿನಿಧಿಗಳು ಮೂಕ ಪ್ರೇಕ್ಷಕರಂತೆ ವರ್ತಿಸುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ಕೆಸರು ಗದ್ದೆಯಂತಾದ ಗ್ರಾಮದ ರಸ್ತೆಗಳಿಂದ ಜನರು ದಿನವೂ ಪರದಾಡುವಂತಾಗಿದ್ದು, ಅಧಿಕಾರಿಗಳು, ಸಚಿವರಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಒಂದು ಕಡೆ ಗ್ರಾಮದಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ. ಕುಡಿಯಲು ಕೆರೆ ನೀರನ್ನೇ ಅವಲಂಬಿತರಾದ ಜನರು ಈ ನೀರನ್ನು ತರಬೇಕಾದ್ರೆ ಹರಸಾಹಸ ಪಡಬೇಕಾಗಿದೆ. ಗ್ರಾಮದ ಒಂದೇ ಒಂದು ರಸ್ತೆ ಸರಿಯಿಲ್ಲ. ಈ ರಸ್ತೆಗಳಲ್ಲಿ ಕಾಲಿಟ್ಟರೆ ಬೀಳುವುದು ಗ್ಯಾರಂಟಿ. ವಯೋವೃದ್ಧರು ಮನೆಯಿಂದ ಹೊರಗೆ ಬರುತ್ತಿಲ್ಲ. ನಾವು ಸಾಯುವ ಮುಂಚೆ ಒಳ್ಳೆಯ ರಸ್ತೆ ನಿರ್ಮಿಸಿ ಪುಣ್ಯ ಕಟ್ಟಿಕೊಳ್ಳಿ ಎಂದು ಅಂಗಲಾಚುತ್ತಿದ್ದಾರೆ.

ರಸ್ತೆಗಾಗಿ ಗ್ರಾಮಸ್ಥರು ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಇಲ್ಲಿವರೆಗೂ ಜನಪ್ರತಿನಿಧಿಗಳು, ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ. ಗ್ರಾಮೀಣಾಭಿವೃದ್ಧಿಗೆ ಕೋಟಿ ಕೋಟಿ‌ ಖರ್ಚು ಮಾಡುವ ಸರ್ಕಾರ. ಕೋಟಿ ಕೋಟಿ ಖರ್ಚಾದ್ರೂ ಈ ಗ್ರಾಮದ ರಸ್ತೆಗಳು ಅಭಿವೃದ್ಧಿ ಆಗಿಲ್ಲ ಏಕೆ ? ಇದೇನಾ ನಿಮ್ಮ ಗ್ರಾಮಗಳ ಅಭಿವೃದ್ಧಿ ಎಂದು ಸರ್ಕಾರದ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕುತ್ತಿದ್ದಾರೆ.

Edited By : Shivu K
Kshetra Samachara

Kshetra Samachara

16/07/2022 03:57 pm

Cinque Terre

33.22 K

Cinque Terre

11

ಸಂಬಂಧಿತ ಸುದ್ದಿ