ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಸೋರುತ್ತಿದೆ ಕಲಘಟಗಿ ತಾಲೂಕ ಪಂಚಾಯತ್

ಕಲಘಟಗಿ: ಕಲಘಟಗಿ ಪಟ್ಟಣದ ತಾಲೂಕ ಪಂಚಾಯತ್ ಕಾರ್ಯಾಲಯವು ಸತತ ಮಳೆಯಿಂದಾಗಿ ಸೋರುತ್ತಿದೆ. ಕಚೇರಿಗೆ ಬರುವ ಸಾರ್ವಜನಿಕರಿಗೆ ಭಯದ ವಾತಾವರಣ ಹುಟ್ಟಿದ್ದಂತಾಗಿದೆ. ಅಷ್ಟಲ್ಲದೆ ಇಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ಕುಳಿತುಕೊಳ್ಳುವ ಜಾಗದಲ್ಲಿ ನೀರು ಸೋರುತ್ತಿದ್ದು ಕೆಲಸಕ್ಕೆ ಅಡಚಣೆಯಾಗಿದೆ.

ಸುಮಾರು ಇಪ್ಪತ್ತು ವರ್ಷಗಳ ಹಳೆಯ ಕಟ್ಟಡ ಇದಾಗಿದ್ದು ಮೇಲ್ಛಾವಣಿ ಎಲ್ಲೆಂದರಲ್ಲಿ ಸೋರುತ್ತಿದೆ. ಈಗಾಗಲೆ ಈ ಕಚೇರಿ ಪಕ್ಕದಲ್ಲಿ ಹೊಸ ಕಟ್ಟಡ ನಿರ್ಮಾಣ ವಾಗುತ್ತಿದೆ. ಈ ಕೆಲಸ ಪ್ರಗತಿಯಲ್ಲಿದ್ದು ನೂತನ ಕಟ್ಟಡ ನಿರ್ಮಾಣ ವಾಗುವವರೆಗೂ ಈ ಕಟ್ಟಡವನ್ನು ದುರಸ್ತಿ ಪಡಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Edited By :
Kshetra Samachara

Kshetra Samachara

15/07/2022 04:07 pm

Cinque Terre

38.99 K

Cinque Terre

0

ಸಂಬಂಧಿತ ಸುದ್ದಿ