ಕುಂದಗೋಳ: ಎಲ್ಲೆಡೆ ಸುರಿಯುತ್ತಿರುವ ಧಾರಾಕಾರ ಮಳೆಗೆ ಹಳ್ಳಿಗಳಿಂದ ಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಅಕ್ಷರಶಃ ಹಾಳಾಗಿದ್ದು ಸಂಚಾರಕ್ಕೆ ಮಾರಕ ಆಗ್ತಾ ಇವೆ.
ಈ ಪಾಲಿಗೆ ಕುಂದಗೋಳ ತಾಲೂಕಿನ ಹಿರೆನೇರ್ತಿ ಗ್ರಾಮದಿಂದ ಬಸಾಪೂರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ರಾಡಿಮಯವಾಗಿದ್ದು, ಸಾರ್ವಜನಿಕರ ಓಡಾಟ ಹಾಗೂ ಬೈಕ್ ಸೇರಿದಂತೆ ಇತರೆ ವಾಹನಗಳ ಓಡಾಟ ಬಲು ಕಷ್ಟವಾಗಿದೆ.
ರಸ್ತೆ ತುಂಬಾ ರಾಡಿ, ಮಣ್ಣು, ನೀರು ತುಂಬಿದ ಪರಿಣಾಮ ರಸ್ತೆ ಹರಳೆಣ್ಣೆ ಸುರಿದಂತೆ ಕಾಣುತ್ತಿದ್ದು ಸ್ವಲ್ಪ ಯಾಮಾರಿದ್ರೂ ಕಾಲು ಜಾರಿ ನೆಲಕ್ಕೆ ಬೀಳೋದು ಪಕ್ಕಾ ಕಳೆದ ಹಲವಾರು ವರ್ಷಗಳಿಂದ ಈ ರಸ್ತೆ ಪರಿಸ್ಥಿತಿ ಹೀಗೆ ಅವ್ಯವಸ್ಥೆ ತಲುಪಿದ್ದು ಇದು ಲೋಕೋಪಯೋಗಿ ಇಲಾಖೆ ರಸ್ತೆ ಆದ ಕಾರಣ ಅಧಿಕಾರಿಗಳು ಗಮನಕೊಡುವಂತೆ ಸ್ಥಳೀಯರು ಪಬ್ಲಿಕ್ ನೆಕ್ಸ್ಟ್'ಗೆ ರಸ್ತೆ ಅವ್ಯವಸ್ಥೆ ವಿಡಿಯೋ ಕಳುಹಿಸಿ ಅಭಿವೃದ್ಧಿಗೆ ಒತ್ತಾಯ ಮಾಡುತ್ತಿದ್ದಾರೆ.
Kshetra Samachara
12/07/2022 02:00 pm