ಧಾರವಾಡ: ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳೇ.. ಧಾರವಾಡ ನಗರದ ಕೋರ್ಟ್ ಸರ್ಕಲ್ ಬಳಿಯ ಮುಖ್ಯರಸ್ತೆಯಲ್ಲಿ ಗುಂಡಿ ಬಾಯ್ಬಿಟ್ಟು ಬಲಿಗಾಗಿ ಕಾಯ್ತಾ ಇರೋದನ್ನು ಒಮ್ಮೆ ಬಂದು ನೋಡಿ….
ಅಲ್ಲದೇ... ಮತ್ತೊಂದೆಡೆ ರಸ್ತೆ ಪಕ್ಕದಲ್ಲಿ ತಗ್ಗು ಬಿದ್ದಿದ್ದು, ಸಣ್ಣ ಮಕ್ಕಳಿಂದ ಹಿಡಿದು ವಯಸ್ಕರವರೆಗೂ ನಿತ್ಯ ಓಡಾಡುವ ಜನ ಜೀವ ಕೈಯಲ್ಲಿಡಿದು ನಡೆದಾಡುವ ಪರಿಸ್ಥಿತಿ ಇದೆ.
ತೆರೆದ ಗುಂಡಿಯೊಳಗೆ ಆಳವಾಗಿ ನೀರು ನಿಂತಿದ್ದು, ರಾತ್ರಿ ಹೊತ್ತಲ್ಲಿ ಸ್ವಲ್ಪ ಯಾಮಾರಿದ್ರೂ ಗುಂಡಿಯೊಳಗೆ ಬೀಳುವ ಪ್ರಸಂಗವಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗುಂಡಿ ಮುಚ್ಚುವ ಕಾರ್ಯ, ಜೊತೆಗೆ ಪಕ್ಕದಲ್ಲಿರೋ ತಗ್ಗು ಸಮಗೊಳಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
-ಮೌನೇಶ ಬಿ. ಮಂಗಿಹಾಳ, ಪಬ್ಲಿಕ್ ನೆಕ್ಸ್ಟ್, ಧಾರವಾಡ
Kshetra Samachara
12/07/2022 01:27 pm