ಕುಂದಗೋಳ: ಸುತ್ತ ಹಸಿರು ಬೆಳೆ ನಡುವೆ ನಿರ್ಮಾಣವಾದ ಕಾಂಕ್ರೀಟ್ ಕಾಡಿನ ನಗರ, ಆ ನಗರಕ್ಕೆ ವಿದ್ಯುತ್ ಸಂಪರ್ಕ ಇಲ್ಲಾ, ಚರಂಡಿ ವ್ಯವಸ್ಥೆ ಇಲ್ಲಾ, ಸೂಕ್ತ ರಸ್ತೆ, ಸೇರಿ ಯಾವುದೇ ಮೂಲ ಸೌಕರ್ಯಗಳು ಅಲ್ಲಿ ಇಲ್ಲವೇ ಇಲ್ಲಾ.
ಮಾಜಿ ಸಚಿವ ದಿವಂಗತ ಸಿ.ಎಸ್.ಶಿವಳ್ಳಿಯವರು ಶಾಸಕರಿದ್ದ ಅವಧಿಯಲ್ಲಿ ನಿರಾಶ್ರಿತರಿಗೆ ನಿರ್ಮಿಸಿದ ಅಮರಶಿವ ಬಡಾವಣೆ ನಿವಾಸಿಗಳು ಮೂರ್ನಾಲ್ಕು ವರ್ಷಗಳಿಂದ ಅಲ್ಲಿಯೇ ವಾಸಿಸುತ್ತಿದ್ದು ಕೆಲವರು ಪೂರ್ತಿ ಮನೆ ಕಟ್ಟಿದ್ರೇ, ಕೆಲ ಮನೆಗಳು ನಿರ್ಮಾಣ ಹಂತದಲ್ಲಿವೆ, ಕೆಲವರು ಇಲ್ಲೇ ವಾಸ ಆರಂಭಿಸಿದ್ದಾರೆ.
ಹೀಗೆ ಕುಂದಗೋಳ ಪಟ್ಟಣದಲ್ಲಿ ಮನೆ ಬಾಡಿಗೆ ಕಟ್ಟಲಾಗದೆ, ಅರ್ಧಂಬರ್ಧ ತಯಾರಾದ ಮನೆಯಲ್ಲೇ ವಾಸಿಸುವ ನಿವಾಸಿಗಳು ನಿತ್ಯ ನಾಲ್ಕು ಕಿಲೋ ಮೀಟರ್ ಪ್ರಯಾಣ ಬೆಳೆಸಿ ಕುಡಿಯುವ ನೀರು, ಮೊಬೈಲ್ ಚಾರ್ಜ್, ಸಿಲಿಂಡರ್ ಸಹ ಬೇರೆಡೆ ಹೋಗಿ ತರಬೇಕು.
ಇನ್ನೂ ಮಳೆಗಾಲದಲ್ಲಿ ರಾಡಿ, ಕಲುಷಿತ ರಸ್ತೆ, ಮುಳ್ಳು, ಕಂಟಿ, ಹಾವು, ಚೇಳು ಸೇರುವಂತಹ ಈ ಬಡಾವಣೆಯ ಬದುಕು ಕಷ್ಟವಾಗಿ ಶಾಲಾ ಮಕ್ಕಳನ್ನು ಶಾಲೆಗೆ ಬಿಡಲಾಗದೆ ಪುನಃ ಕರೆದುಕೊಂಡು ಬರಲಾಗದೆ ಶಾಲೆ ಸಹ ಬಿಡಿಸಿ ಮನೆಪಾಠ ಆರಂಭಿಸಿ ಏನು ಹೇಳ್ತಾರೆ ಕೇಳಿ.
ಈಗಾಗಲೇ 397 ಮನೆ ಅಮರಶಿವ ನಗರದಲ್ಲಿ ಮಂಜೂರಾಗಿದ್ದು 215 ಮನೆಗಳು ನಿರ್ಮಾಣ ಆಗಿವೆ ಇನ್ನೂಳಿದವರು ಸೌಕರ್ಯಗಳ ಕೊರತೆಯಿಂದ ಇತ್ತ ತಲೆ ಹಾಕಲು ಹಿಂದೇಟು ಹಾಕುತ್ತಿದ್ದಾರೆ. ಕಳೆದ 2018-19 ರಲ್ಲೇ ಈ ಬಡವಾಣೆಯಲ್ಲಿ ಎರೆಡು ಬೋರವೆಲ್ ಕೊರೆಸಲಾಗಿದ್ದು ವಿದ್ಯುತ್ ಸಂಪರ್ಕ ಇಲ್ಲದೆ ಸ್ಥಗಿತಗೊಂಡಿವೆ.
ಒಟ್ಟಾರೆ ರಾಜ್ಯ ಬಿಜೆಪಿ ಸರ್ಕಾರ ಹಾಲಿ ಶಾಸಕಿ ಕುಸುಮಾವತಿ ಶಿವಳ್ಳಿ ಪಟ್ಟಣ ಪಂಚಾಯಿತಿ ಇಚ್ಚಾಶಕ್ತಿ ಕೊರತೆಯಿಂದ ಅಮರಶಿವ ಬಡಾವಣೆ ನಿವಾಸಿಗಳ ಬದುಕು ಅಕ್ಷರಶಃ ನರಕವಾಗಿದೆ.
ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ
Kshetra Samachara
11/07/2022 08:47 pm