ಹುಬ್ಬಳ್ಳಿ: ಅದು ನಿಜಕ್ಕೂ ಹುಬ್ಬಳ್ಳಿ ಮಾತ್ರವಲ್ಲದೆ, ಸುತ್ತಮುತ್ತಲಿನ ಜಿಲ್ಲೆ ಜನರ ಪ್ರವಾಸಿ ತಾಣ. ಆದರೆ, ಆ ತಾಣದ ಹೆಸರಿನಲ್ಲಿರುವ ನಗರದ ಅವಸ್ಥೆ ನೋಡಿ ಜನ ಬೇಸರಿಸುವಂತಾಗಿದೆ.
ಹೌದು... ಹುಬ್ಬಳ್ಳಿಯಲ್ಲಿ ನೃಪತುಂಗ ಬೆಟ್ಟ ಅಂದರೆ ಇಲ್ಲಿನ ಜನರಿಗೆ ಮಾತ್ರವಲ್ಲದೆ ಧಾರವಾಡ, ಗದಗ ಹಾಗೂ ಹಾವೇರಿ ಜಿಲ್ಲೆಯ ಪ್ರವಾಸಿಗರಿಗೆ ಸ್ವರ್ಗವೇ ಧರೆಗೆ ಇಳಿದಂತೆ. ಆದರೆ, ನೃಪತುಂಗ ನಗರದ ಅವ್ಯವಸ್ಥೆ ನೋಡಿದರೇ ನರಕವೇ ನೆಲೆಸಿದಂತೆ. ನೃಪತುಂಗ ಬೆಟ್ಟದ ಹಿಂಭಾಗದಲ್ಲಿರುವ ಉಣಕಲ್ ಗೆ ಹೊಂದಿಕೊಂಡಿರುವ ನಗರದ ಎಲ್ಲೆಂದರಲ್ಲಿ ಕೆಸರು ತುಂಬಿದ ಗುಂಡಿಗಳು ಎದ್ದಿದ್ದು, ಸಂಚರಿಸಲು ಹರಸಾಹಸ ಪಡುವಂತಾಗಿದೆ.
ಈ ಬಗ್ಗೆ ಮನವಿ ನೀಡಿದರೂ ಯಾವುದೇ ಕ್ರಮಗಳನ್ನು ಪಾಲಿಕೆಯವರಾಗಲಿ, ಜನಪ್ರತಿನಿಧಿಗಳಾಗಲಿ ಕೈಗೊಂಡಿಲ್ಲ ಎಂದು ನೊಂದ ಜನರು ಹಿಡಿಶಾಪ ಹಾಕುತ್ತಿದ್ದಾರೆ. ಈ ರಸ್ತೆಯಲ್ಲಿ ಬಿದ್ದು ಹಲವು ಜನರು ಗಾಯಗೊಂಡಿದ್ದರೂ ದುರಸ್ತಿಗೆ ಆಡಳಿತ ಮುಂದಾಗದಿರುವುದು ವಿಪರ್ಯಾಸ.
ಒಟ್ಟಿನಲ್ಲಿ ನೃಪತುಂಗನಗರ ಒಂದಿಲ್ಲೊಂದು ಮೂಲಭೂತ ಸೌಕರ್ಯ ಕೊರತೆಯಿಂದ ನಲುಗುತ್ತಿದೆ. ಈ ಬಗ್ಗೆ ಮಹಾನಗರ ಪಾಲಿಕೆ ಹಾಗೂ ಸ್ಥಳೀಯ ಶಾಸಕರು ಸೂಕ್ತ ಅನುದಾನ ಬಿಡುಗಡೆ ಮಾಡಿ ಸಾರ್ವಜನಿಕರ ಸಮಸ್ಯೆ ಶೀಘ್ರ ಬಗೆಹರಿಸುವ ಕಾರ್ಯ ಮಾಡಬೇಕಿದೆ.
Kshetra Samachara
11/07/2022 01:06 pm