ಅಳ್ನಾವರ: ಬೇಡ ಜಂಗಮರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ವಿತರಿಸಲು ಹಾಗೂ ರಾಜ್ಯದಲ್ಲಿ ಬೇಡ ಜಂಗಮ ಹೋರಾಟವನ್ನು ತಡೆಯಬೇಡಿ ಎಂದು ಪಟ್ಟಣ ಪಂಚಾಯಿತಿ ಎದುರು 'ತಾಲೂಕು ಬೇಡ ಜಂಗಮ ಯುವ ವೇದಿಕೆ' ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿತು.
ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು,ನಮ್ಮ ಸಮಾಜದ ಬೇಡಿಕೆ ಈಡೇರಿಸಬೇಕು,ಹಾಗೂ ಅಖಿಲ ಕರ್ನಾಟಕ ಬೇಡ ಜಂಗಮ ಸಂಘಟನೆ ಒಕ್ಕೂಟ ವತಿಯಿಂದ ನಡೆಯುತ್ತಿದ್ದ ಸತ್ಯ ಪ್ರತಿಭಟನಾ ಹೋರಾಟ ತಡೆದ ಕ್ರಮ ಸರಿಯಿಲ್ಲ ಎಂದರು.
ನಂತರ ತಹಸೀಲ್ದಾರ್ ಅಮರೇಶ ಪಮ್ಮಾರ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಹಿರಿಯರಾದ ಎಂ ಸಿ,ಹಿರೇಮಠ,ಡಾ. ಸಂಜಯ ಚಂದರಗಿಮಠ,ಶಿವಾನಂದ ಹಿರೇಮಠ,ಆರ್.ಜಿ.ಹಿರೇಮಠ,ಎಸ್.ಡಿ.ದೇಗಾವಿಮಠ, ಚರಂತಯ್ಯಾ ಹಸಬಿಮಠ, ಎಂ.ಎಂ.ಯರಗಂಬಳಿಮಠ,ಸುಶಾಂತ,ಅಶೋಕ,ಗಂಗಯ್ಯ ಅರವಟಗಿ ಇತರರು ಇದ್ದರು.
Kshetra Samachara
08/07/2022 09:57 pm