ಅಳ್ನಾವರ: ಪಟ್ಟಣದಲ್ಲಿನ ಹೋಟೆಲ್ ಹಾಗೂ ಅಂಗಡಿ ಮುಗ್ಗಟ್ಟುಗಳಲ್ಲಿ ಅನಧಿಕೃತವಾಗಿ ಬಳಸಲಾಗುತ್ತಿದ್ದ ಪ್ಲಾಸ್ಟಿಕ್ ಹಾಗೂ ಸಿಲೆಂಡರ್ ಗಳನ್ನು ಅಧಿಕಾರಿಗಳು ಇಂದು ವಶಕ್ಕೆ ಪಡೆದಿದ್ದಾರೆ.
ಸರ್ಕಾರ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿದೆ.ಅದನ್ನ ಅರಿಯದೆ ಅಂಗಡಿಗಳಲ್ಲಿ ಹೋಲಸೇಲ್ ದರದಲ್ಲಿ ಪ್ಲಾಸ್ಟಿಕ್ ಬಳಕೆ ಮಾಡಲಾಗುತ್ತಿದ್ದನ್ನು ಅರಿತ ತಹಶೀಲ್ದಾರ್ ಹಾಗೂ ಅಧಿಕಾರಿಗಳ ತಂಡ ಪ್ಲಾಸ್ಟಿಕ್ ವಶಕ್ಕೆ ಪಡೆದು ತನಿಖೆ ಹಾಗೂ ಪರಿಶೀಲನೆ ನಡೆಸುತ್ತಿದ್ದಾರೆ.
ಅಷ್ಟೇ ಅಲ್ಲದೆ ಗೃಹ ಬಳಕೆ ಸಿಲೆಂಡರ್ ಗಳನ್ನು ಹೋಟೆಲ್ ಗಳಲ್ಲಿ ಬಳಸಲಾಗುತ್ತಿದ್ದು ಇದು ಅಕ್ಷಮ್ಯ ಅಪರಾದವಾಗಿದೆ.ಹೀಗೆ ಅನಧಿಕೃತವಾಗಿ ಬಲಸಲಾಗುತ್ತಿದ್ದ ಗೃಹ ಬಳಕೆ ಸಿಲೆಂಡರ್ ಗಳನ್ನು ಅಧಿಕಾರಿಗಳು ಇಂದು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ಇನ್ನು ಈ ಸಂದರ್ಭದಲ್ಲಿ ತಹಶೀಲ್ದಾರ್ ಅಮರೇಶ ಪಮ್ಮಾರ್,ಮುಖ್ಯಾಧಿಕಾರಿ ಪ್ರಭಾಕರ ದೊಡಮಣಿ,ಆಹಾರ ಅಧಿಕಾರಿ ದೀಕ್ಷಿತ್,ಚೇತನ್ ಶಿಂದೆ,ನಾಗರಾಜ ಹಾಗೂ ಮತ್ತೀತರಿದ್ದರು.
Kshetra Samachara
08/07/2022 08:05 pm