ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಬ್ಲಿಕ್ ನೆಕ್ಸ್ಟ್ ವರದಿಗೆ ಸ್ಪಂದಿಸಿದ ಜಲಮಂಡಳಿ: ನೀರಿನ ಪೈಪ್ ಲೈನ್ ದುರಸ್ತಿ

ಧಾರವಾಡ : ಪೋಲಾಗುತ್ತಿದೆ ನೀರು ಜಲಮಂಡಳಿಯವರೇ ಇತ್ತ ಕಡೆ ನೋಡಿ ಎಂಬ ಶೀರ್ಷಿಕೆಯಡಿ ಮೊನ್ನೆಯಷ್ಟೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ಪ್ರಸಾರ ಮಾಡಿದ್ದ ವರದಿಗೆ ಜಲಮಂಡಳಿ ಸ್ಪಂದಿಸಿದೆ.

ಧಾರವಾಡದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಮುಂಭಾಗದಲ್ಲಿ ಕಳೆದ ಒಂದು ತಿಂಗಳಿನಿಂದ ಕುಡಿಯುವ ನೀರು ಪೋಲಾಗುತ್ತಿದ್ದರೂ ಜಲಮಂಡಳಿವರು ಅದರ ದುರಸ್ತಿ ಕಾರ್ಯಕ್ಕೆ ಮುಂದಾಗಿರಲಿಲ್ಲ.

ರಸ್ತೆಯ ತಳಭಾಗದಲ್ಲಿ ಕುಡಿಯುವ ನೀರಿನ ಪೈಪ್ ಒಡೆದಿದ್ದು, ಅದರ ಮೂಲಕ ಕುಡಿಯುವ ನೀರು ಪೋಲಾಗುತ್ತಿತ್ತು. ಈ ಸಂಬಂಧ ನಿಮ್ಮ ಪಬ್ಲಿಕ್ ನೆಕ್ಸ್ಟ್ ವರದಿಯೊಂದನ್ನು ಪ್ರಸಾರ ಮಾಡಿತ್ತು.

ವರದಿಯಿಂದ ಎಚ್ಚೆತ್ತ ಜಲಮಂಡಳಿಯವರು, ಇದೀಗ ಆ ಪೈಪ್ಲೈನ್ ದುರಸ್ತಿ ಕಾರ್ಯಕ್ಕೆ ಮುಂದಾಗಿದ್ದಾರೆ.

Edited By : Manjunath H D
Kshetra Samachara

Kshetra Samachara

24/06/2022 12:56 pm

Cinque Terre

25.18 K

Cinque Terre

1

ಸಂಬಂಧಿತ ಸುದ್ದಿ