ನವಲಗುಂದ: ನವಲಗುಂದ ತಾಲ್ಲೂಕಿನ ಬಹುತೇಕ ಹಳ್ಳಿಗಳಲ್ಲಿನ ರೈತರ ಜಮೀನುಗಳಲ್ಲಿ ಈ ರೀತಿ ದೃಶ್ಯಗಳು ಕಂಡು ಬರುವುದು ಸರ್ವೇ ಸಾಮಾನ್ಯ. ಕಂಬಗಳು ಸಂಪೂರ್ಣ ಬಾಗಿದ್ದು, ಈಗೋ ಆಗೋ ಬಿಳುತ್ತವೇ ಎನ್ನುವ ಆತಂಕದಲ್ಲಿ ರೈತರಿದ್ದಾರೆ.
ಹೌದು ಈ ದೃಶ್ಯಗಳು ಕಂಡು ಬಂದದ್ದು ನವಲಗುಂದ ವಿಧಾನಸಭಾ ಕ್ಷೇತ್ರದ ಅಣ್ಣಿಗೇರಿ ತಾಲ್ಲೂಕಿನ ನಾವಳ್ಳಿ ಗ್ರಾಮದಲ್ಲಿ. ನಾವಳ್ಳಿ ಗ್ರಾಮಕ್ಕೆ ಇಬ್ರಾಹಿಂಪುರ ಮಾರ್ಗವಾಗಿ ನೀವು ಪ್ರಯಾಣಿಸುವಾಗ ಈ ದುಸ್ಥಿತಿಯನ್ನು ನೀವು ನೋಡೇ ಇರ್ತೀರಿ. ಹೀಗೆ ವಿದ್ಯುತ್ ಕಂಬಗಳು ವಾಲಿದ ಆತಂಕವನ್ನು ದಿನನಿತ್ಯ ಇಲ್ಲಿನ ರೈತರು ಎದುರಿಸುತ್ತಿದ್ದಾರೆ. ಯಾವಾಗ ಕಂಬಗಳು ಬಿಳ್ಳುತ್ತೋ ಅನ್ನೋ ಆತಂಕದಲ್ಲೇ ರೈತರು ಜೀವನ ನಡೆಸುತ್ತಿದ್ದಾರೆ.
ಕಳೆದ ಶನಿವಾರ ಇಬ್ರಾಹಿಂಪುರ ಗ್ರಾಮದಲ್ಲಿ ನಡೆದ ವಿದ್ಯುತ್ ಅದಾಲತ್ ಕಾರ್ಯಕ್ರಮಕ್ಕೆಂದು ಅಧಿಕಾರಿಗಳು ತೆರಳಿದಾಗ ಈ ಸಮಸ್ಯೆ ಬಗ್ಗೆ ಗ್ರಾಮಸ್ಥರು ಮನವಿ ನೀಡಿದ್ದಾರಂತೆ, ಇನ್ನು ಮೇಲಾದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು ಎಂಬದು ಗ್ರಾಮಸ್ಥರ ಆಗ್ರಹವಾಗಿದೆ. ವಿದ್ಯುತ್ ಕಂಬಗಳ ದುರಸ್ಥಿ ಮಾಡಿ, ಸಾರ್ವಜನಿಕರ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸಬೇಕಿದೆ.
ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ
Kshetra Samachara
24/06/2022 11:00 am