ಅಣ್ಣಿಗೇರಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಯೋಜನೆ ಅಡಿಯಲ್ಲಿ ತಾಲೂಕಿನ ಶಿಶ್ವಿನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಬೆನ್ನೂರು ಗ್ರಾಮದಲ್ಲಿ ಎನ್ ಆರ್ ಜಿ ಯೋಜನೆಯಡಿ ಕೆಲಸ ಭರದಿಂದ ಸಾಗಿದೆ.
ಸರಕಾರ, ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಕಲ್ಪಿಸಿಕೊಡುವ ನಿಟ್ಟಿನಲ್ಲಿ ವರ್ಷಕ್ಕೆ 100 ದಿನ ಕೆಲಸ, ದಿನಂಪ್ರತಿ 309 ರೂ. ಕೂಲಿ ನೀಡುತ್ತಿದೆ. ಈ ಹಿನ್ನೆಲೆ ತಾಲೂಕಿನ ಬೆನ್ನೂರು ಗ್ರಾಮದಲ್ಲಿ ರೈತರ ಜಮೀನುಗಳಲ್ಲಿ ನೀರು ಹರಿಯುವ ಕಾಲುವೆ ಹೂಳೆತ್ತುವ ಕಾಮಗಾರಿ ಹಾಗೂ ಕುಡಿಯುವ ನೀರಿನ ಕೆರೆ ಸ್ವಚ್ಛಗೊಳಿಸುವುದು ಹೀಗೆ ಹಲವಾರು ಕಾಮಗಾರಿಗಳು ಭರದಿಂದ ಸಾಗಿದೆ.
ಒಟ್ಟಾರೆಯಾಗಿ ಗ್ರಾಮೀಣ ಭಾಗದ ಜನರಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ಕೆಲಸ ಸಿಗುತ್ತಿರುವುದರಿಂದ ಸ್ವಲ್ಪಮಟ್ಟಿಗೆ ಆದರೂ ನಿರುದ್ಯೋಗ ಸಮಸ್ಯೆ ದೂರವಾಗಬಹುದು ಎಂಬುದು ಸಾಮಾನ್ಯ ಅಭಿಪ್ರಾಯ.
Kshetra Samachara
23/06/2022 12:40 pm