ಕುಂದಗೋಳ: ಮಳೆಗೆ ಹಾಳಾದ ರಸ್ತೆ ದುರಸ್ತಿ ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ ಎಂಬುದಕ್ಕೆ ಯರಗುಪ್ಪಿ ಗ್ರಾಮದಿಂದ ಮಳ್ಳಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿನ ಬೃಹತ್ ತಗ್ಗು ಸಾಕ್ಷಿಯಾಗಿದೆ.
ಕಳೆದ ಹಲವಾರು ದಿನಗಳ ಹಿಂದೆಯೇ ಸುರಿದ ಧಾರಾಕಾರ ಮಳೆಗೆ ಈ ರಸ್ತೆಯಲ್ಲಿ ಬೃಹತ್ ತಗ್ಗು ಬಿದ್ದು ವಾಹನ ಸಂಚಾರ ಕೃಷಿ ಚಟುವಟಿಕೆಯ ಟ್ರ್ಯಾಕ್ಟರ್ ಚಕ್ಕಡಿ ಜಾನುವಾರು ಓಡಾಟ ಬಂದ್ ಆಗುವ ಹಂತದಲ್ಲಿದೆ. ಪರಿಸ್ಥಿತಿ ಹೀಗಿದ್ದರೂ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಏತಕ್ಕೆ ಸುಮ್ಮನಿದ್ದಾರೆ? ಎಂಬುದು ಜನರಲ್ಲಿ ಸಂಶಯ ಮೂಡಿಸಿದೆ.
ಈ ಹಿಂದೆ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಪ್ರವಾಹದ ಸಂದರ್ಭದಲ್ಲಿ ನಿರ್ಮಿಸಿದ ರಸ್ತೆ ಪುನಃ ಹಾಳಾಗಿರುವುದು ಕಳಪೆ ಕಾಮಗಾರಿಗೆ ಹಿಡಿದ ಕೈ ಗನ್ನಡಿಯಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಿ ರಸ್ತೆ ಅಭಿವೃದ್ಧಿ ಪಡಿಸುವಂತೆ ಜನ ಒತ್ತಾಯಿಸಿದ್ದಾರೆ.
Kshetra Samachara
17/06/2022 05:27 pm